ಸೆಕೆಂಡ್ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ವೇಳಾಪಟ್ಟಿ ಪ್ರಕಟ : ಮೇ 22 ರಿಂದ ಜೂನ್ 2ರವರೆಗೆ ಪೂರಕ ಪರೀಕ್ಷೆ - Karavali Times ಸೆಕೆಂಡ್ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ವೇಳಾಪಟ್ಟಿ ಪ್ರಕಟ : ಮೇ 22 ರಿಂದ ಜೂನ್ 2ರವರೆಗೆ ಪೂರಕ ಪರೀಕ್ಷೆ - Karavali Times

728x90

3 May 2023

ಸೆಕೆಂಡ್ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ವೇಳಾಪಟ್ಟಿ ಪ್ರಕಟ : ಮೇ 22 ರಿಂದ ಜೂನ್ 2ರವರೆಗೆ ಪೂರಕ ಪರೀಕ್ಷೆ

ಬೆಂಗಳೂರು, ಮೇ 03, 2023 (ಕರಾವಳಿ ಟೈಮ್ಸ್) : 2023ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಮೇ 22 ರಿಂದ ಜೂನ್ 2 ರವರೆಗೆ ನಡೆಸಲು ಮಂಡಳಿ ನಿರ್ಧರಿಸಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರತಿ ದಿನ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮತ್ತು ಕಡಿಮೆ ಅಂಕ ಬಂದು ಪೂರಕ ಪರೀಕ್ಷೆ ಬರೆಯಲು ನಿರ್ಧರಿಸಿರುವ ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಹಾಜರಾಗುವಂತೆ ಮಂಡಳಿ ತಿಳಿಸಿದೆ.


ಪೂರಕ ಪರೀಕ್ಷೆಯ ವೇಳಾಪಟ್ಟಿ ಇಂತಿದೆ : 


ಮೇ 22 ರಂದು ಸೋಮವಾರ ಕನ್ನಡ, ಅರೇಬಿಕ್, ಮೇ 23 ರಂದು ಮಂಗಳವಾರ ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ, ಮೇ 24 ರಂದು ಬುಧವಾರ ಇಂಗ್ಲೀಷ್, ಮೇ 25 ರಂದು ಗುರುವಾರ ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಮೇ 26 ರಂದು ಶುಕ್ರವಾರ ಇತಿಹಾಸ, ಸಂಖ್ಯಾಶಾಸ್ತ್ರ, ಮೇ 27 ರಂದು ಶನಿವಾರ ಹಿಂದಿ, ಮೇ 29 ರಂದು ಸೋಮವಾರ ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ, ಮೇ 30 ರಂದು ಮಂಗಳವಾರ ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ, ಮೇ 31 ರಂದು ಬುಧವಾರ ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ, ಜೂನ್ 1 ರಂದು ಗುರುವಾರ ತರ್ಕಶಾಸ್ತ್ರ, ಹಿಂದುಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ ಹಾಗೂ ಜೂನ್ 2 ರಂದು ಶುಕ್ರವಾರ ಅರ್ಥಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸೆಕೆಂಡ್ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ವೇಳಾಪಟ್ಟಿ ಪ್ರಕಟ : ಮೇ 22 ರಿಂದ ಜೂನ್ 2ರವರೆಗೆ ಪೂರಕ ಪರೀಕ್ಷೆ Rating: 5 Reviewed By: karavali Times
Scroll to Top