ಬೆಂಗಳೂರು, ಮೇ 22, 2023 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಸಪ್ಲಿಮೆಂಟರಿ ಎಕ್ಸಾಂ ಟೈಂ-ಟೇಬಲ್ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಸೋಮವಾರ ಪ್ರಕಟಗೊಂಡಿದ್ದು, ಜೂನ್ 12 ರಿಂದ 19ರವರೆಗೆ ಪರೀಕ್ಷೆಗಳು ನಡೆಯಲಿವೆ.
ಜೂನ್ 12 ರಂದು ಪ್ರಥಮ ಭಾಷೆ, ಜೂನ್ 13 ರಂದು ವಿಜ್ಞಾನ, ಜೂನ್ 14 ರಂದು ದ್ವಿತೀಯ ಭಾಷೆ,
ಜೂನ್ 15 ರಂದು ಸಮಾಜ ವಿಜ್ಞಾನ, ಜೂನ್ 16 ರಂದು ತೃತೀಯ ಭಾಷೆ, ಜೂನ್ 17 ರಂದು ಗಣಿತ ಪರೀಕ್ಷೆಗಳು ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆ ತಿಳಿಸಿದೆ.
0 comments:
Post a Comment