ಬಂಟ್ವಾಳ, ಮೇ 14, 2023 (ಕರಾವಳಿ ಟೈಮ್ಸ್) : ಬಂಟ್ವಾಳ-ವಿದ್ಯಾಗಿರಿ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ಸಿಬಿಎಸ್‍ಸಿ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಹಾಜರಾದ ಒಟ್ಟು 29 ಮಂದಿ ವಿದ್ಯಾರ್ಥಿಗಳ ಪೈಕಿ 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆಗೆ ಸತತ 12ನೇ ಬಾರಿಗೆ 100 ಶೇಕಡಾ ಫಲಿತಾಂಶ ತಂದುಕೊಟ್ಟಿದ್ದಾರೆ.
ಸಾನ್ವಿ ಬನ್ನಿಂತಾಯ (94.4%), ಚೇತಸ್ ಪೈ ವಿ (94%), ಆಶಲ್ ಜಾಸ್ಲಿನ್ ಪಾಯಸ್ (94%), ರಿಯಾನ ಸೊನಾಲಿ ಪಿಂಟೊ (92.6%), ಚಿರಂತನ್ ಜಿ ಎನ್ (90.6%), ಉಲ್ಲಾಸ್ ಕೆ ಎಸ್ (90.4%), ಧ್ಯಾನ್ ಕೃಷ್ಣ ಶೆಟ್ಟಿ (90.2%), ಸೋಹಮ್ (90.2%) ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
0 comments:
Post a Comment