ಮಂಗಳೂರು, ಮೇ 31, 2023 (ಕರಾವಳಿ ಟೈಮ್ಸ್) : ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮೇ 31 ರಂದು ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಾದ ಉಪ್ಪಿನಂಗಡಿ ಠಾಣಾ ಪಿಎಸ್ಸೈ ಸುಧಾಕರ್ ಜಿ, ಎಎಸ್ಸೈ ಶಿವಪ್ಪ ಪೂಜಾರಿ ಕೆ, ಪುತ್ತೂರು ನಗರ ಠಾಣಾ ಪಿಎಸ್ಸೈ ಸೋಮನಾಥ ರಾಮ ನಾಯ್ಕ, ಎಎಸೈಗಳಾದ ನಿತ್ಯಾನಂದ ವಿ, ಲೋಕನಾಥ ಕೆ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಎಎಸ್ಸೈ ಕೆ ಮೋಹನ್, ಡಿಎಆರ್ ಎಆರ್‍ಎಸ್‍ಐ ಚಂದ್ರಕಾಂತ್ ಬಿ, ಬೆಳ್ತಂಗಡಿ ಟ್ರಾಫಿಕ್ ಠಾಣಾ ಪಿಎಸ್ಸೈ ಲಕ್ಷ್ಮಣ ಸಿ ಟಿ, ಜಿಲ್ಲಾ ಕಂಟ್ರೋಲ್ ರೂಂ ವೈರ್ ಲೆಸ್ ಪಿಎಸ್ಸೈ ಮೋಹನ್ ಅವರನ್ನು ಬುಧವಾರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪ್ರಭಾರ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ ಬಿ ಅವರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ, ಶುಭ ಹಾರೈಸಿದರು.
ಈ ಸಂದರ್ಭ ಜಿಲ್ಲೆಯ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ನಿವೃತ್ತ ಅಧಿಕಾರಿಗಳ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
0 comments:
Post a Comment