ಬಂಟ್ವಾಳ, ಮೇ 10, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಪಾಣೆಮಂಗಳೂರು ವಲಯದಲ್ಲಿ ಶೇ 74 ಮಂದಿ ಮತದಾರರು ಮತ ಚಲಾವಣೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಅವರು ಸುಮಾರು 1 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಪಡೆಯಲಿದ್ದಾರೆ ಎಂದು ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಮುಂಜಾನೆಯಿಂದಲೇ ವಲಯ ಮಟ್ಟದಲ್ಲಿ ತನ್ನ ಕಾರ್ಯಕರ್ತರ ಪಡೆಯೊಂದಿಗೆ ಮಿಂಚಿನ ಸಂಚಾರ ನಡೆಸಿ ಮತದಾರರ ಜೊತೆ ಮತದಾನ ನಡೆಸುವಂತೆ ಹುರುದುಂಬಿಸುತ್ತಿದ್ದ ಅವರು ವಲಯದ ಪ್ರತಿ ಬೂತ್ ಕಡೆಗೂ ಭೇಟಿ ನೀಡಿ ಮತದಾರರ ಒಲವಿನ ಬಗ್ಗೆ ಅಂದಾಜು ನಡೆಸಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
0 comments:
Post a Comment