ಬಂಟ್ವಾಳ, ಮೇ 18, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನಂದಾವರ ಕೇಂದ್ರ ಜುಮಾ ಮಸೀದಿ ಸಮೀಪ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ವಲಿಯುಲ್ಲಾಹಿ (ರ) ಅವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಉರೂಸ್ ಹಾಗೂ 5 ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಮೇ 24 ರಿಂದ 28ರವರೆಗೆ ಇಲ್ಲಿನ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಮೇ 24 ರಂದು ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಲಿದ್ದು, ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಅಲ್-ಬುಖಾರಿ, ಅಲ್-ಅಝ್‍ಹರಿ ಆನೆಕಲ್ಲು ಅವರು ದುವಾ ಹಾಗೂ ಮಜ್ಲಿಸುನ್ನೂರ್ ವಾರ್ಷಿಕ ಕಾರ್ಯಕ್ರಮದ ನೇತೃತ್ವ ವಹಿಸುವರು. ಶಮೀರ್ ದಾರಿಮಿ ಕೊಲ್ಲಂ-ಕೇರಳ ಅವರು ಮುಖ್ಯ ಭಾಷಣಗೈಯುವರು.
ಮೇ 25 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ನಂದಾವರ ಮಸೀದಿ ಖತೀಬ್ ಕಾಸಿಂ ದಾರಿಮಿ, ಮೇ 26 ರಂದು ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಅಬ್ದುಲ್ ರಝಾಕ್ ಅಬ್ರಾರಿ ಪತ್ತಿನತಿಟ್ಟ-ಕೇರಳ ಧಾರ್ಮಿಕ ಉಪನ್ಯಾಸಗೈಯುವರು.
ಮೇ 27 ರಂದು ಶನಿವಾರ ಅಸ್ತಮಿಸಿದ ಭಾನುವಾರ ರಾತ್ರಿ ವಲಿಯುದ್ದೀನ್ ಫೈಝಿ ವಾಯಕ್ಕಾಡ್-ಕೇರಳ ನೇತೃತ್ವದಲ್ಲಿ ನೂರೇ ಅಜ್ಮೀರ್ ಮಹಾಸಂಗಮ ನಡೆಯಲಿದ್ದು, ಬಂಟ್ವಾಳ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇರ್ಶಾದ್ ದಾರಿಮಿ ಮಿತ್ತಬೈಲು ದುವಾಶಿರ್ವಚನಗೈಯುವರು.
ಮೇ 28 ರಂದು ಭಾನುವಾರ ಅಸ್ತಮಿಸಿದ ಸೋಮವಾರ ರಾತ್ರಿ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದು, ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ದುವಾಶಿರ್ವಚನಗೈಯುವರು. ಹಾಫಿಳ್ ಸಿರಾಜುದ್ದೀನ್ ಅಲ್-ಖಾಸಿಮಿ ಪತ್ತನಾಪುರಂ-ಕೇರಳ ಅವರು ಮುಖ್ಯ ಭಾಷಣಗೈಯುವರು.
ಕಾರ್ಯಕ್ರಮಗಳು ಪ್ರತಿದಿನ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಆರಂಭದಲ್ಲಿ ನಂದಾವರ ಹಿಮಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ಹಾಗೂ ಇಹ್ಯಾ-ಉಲ್ ಉಲೂಂ ಎಸೋಸಿಯೇಶನ್ ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಉರೂಸ್ ಸಮಾರೋಪ ದಿನ ಕಾರ್ಯಕ್ರಮದ ಕೊನೆಗೆ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ನಂದಾವರ ಕೇಂದ್ರ ಜುಮಾ ಮಸೀದಿ ಪ್ರಕಟಣೆ ತಿಳಿಸಿದೆ.
0 comments:
Post a Comment