ಮಂಗಳೂರು, ಮೇ 04, 2023 (ಕರಾವಳಿ ಟೈಮ್ಸ್) : ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ಅಂಚೆ ವಿಭಾಗದಲ್ಲಿ ದಕ್ಷ ಆಡಳಿತ ಮತ್ತು ಅನೇಕ ಹೊಸತನಗಳ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ನೆಟ್ಟಾರ್ ಅವರು ವರ್ಗಾವಣೆಗೊಂಡಿದ್ದು, ಅವರನ್ನು ಇತ್ತೀಚೆಗೆ ಮಂಗಳೂರು ವಿಭಾಗೀಯ ಕಛೇರಿಯಲ್ಲಿ ಬೀಳ್ಕೊಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಲೇಡಿಗೋಷನ್ ಆಸ್ಪತ್ರೆ ಮೆಡಿಕಲ್ ಸುಪರಿಂಟೆಂಡೆಂಟ್ ಡಾ ದುರ್ಗಾ ಪ್ರಸಾದ್ ಎಂ ಆರ್, ಯುಗಪುರುಷ ಇದರ ಪ್ರಕಾಶಕ ಹಾಗೂ ಸಂಪಾದಕ ಭುವನಾಭಿರಾಮ ಉಡುಪ ಶ್ರೀಹರ್ಷ ಅವರ ಸೇವೆ, ಗ್ರಾಹಕರ ಬಗ್ಗೆ ಅವರಿಗೆ ಇದ್ದ ಕಾಳಜಿಗಳ ಬಗ್ಗೆ ಕೊಂಡಾಡಿದರು.
ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್ ಬಿ ಅವರು ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಅಂಚೆ ವಿಭಾಗದ ನೂತನ ಹಿರಿಯ ಅಧೀಕ್ಷಕ ಎಂ ಸುಧಾಕರ್ ಮಲ್ಯ ಅವರು ಶ್ರೀಹರ್ಷ ಅವರಿಗೆ ಶುಭ ಹಾರೈಸಿದರು.
ಹಿರಿಯ ಅಂಚೆ ಪಾಲಕ ದಿನೇಶ್ ಪಿ, ಮಂಗಳೂರು ಪೂರ್ವ ವಿಭಾಗ ಸಹಾಯಕ ಅಧೀಕ್ಷಕ ಸಿ ಪಿ ಹರೀಶ್, ಮಂಗಳೂರು ಉತ್ತರ ಉಪವಿಭಾಗದ ಅಂಚೆ ನಿರೀಕ್ಷಕ ಮೆಲ್ವಿನ್ ಅರುಣ ಲೋಬೊ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment