ಬೆಂಗಳೂರು, ಮೇ 22, 2023 (ಕರಾವಳಿ ಟೈಮ್ಸ್) : ವಿಧಾನಸಭೆಯ ನೂತನ ಸ್ಪೀಕರ್ ಆಗಿ ಮೊದಲ ಎರಡು ವರ್ಷಗಳ ಅವಧಿಗೆ ಮಂಗಳೂರು ಕ್ಷೇತ್ರದ ಶಾಸಕ, ಮಾಜಿ ಸಚಿವ, ವಿರೋಧ ಪಕ್ಷದ ಮಾಜಿ ಉಪನಾಯಕ ಯು ಟಿ ಖಾದರ್ ಅವರನ್ನು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಸೋಲಿಲ್ಲದ ಸರದಾರನಾಗಿ ಮಂಗಳೂರು ಕ್ಷೇತ್ರದಿಂದ ನಿರಂತರವಾಗಿ ಐದು ಬಾರಿ ಜಯಭೇರಿ ಭಾರಿಸಿದ ಯು ಟಿ ಖಾದರ್ ಎರಡು ಬಾರಿ ಸಚಿವರಾಗಿ, ಕಳೆದ ಬಾರಿ ವಿರೋಧ ಪಕ್ಷದ ಉಪನಾಯಕರಾಗಿ ಸಿದ್ದರಾಮಯ್ಯ ಅವರ ಜೊತೆ ಕಾರ್ಯನಿರ್ವಹಿಸಿದ್ದರು. ಖಾದರ್ ಅವರ ಅನುಭವ, ಹಿರಿತನ ಹಾಗೂ ಸ್ವಚ್ಛ ರಾಜಕಾರಣಕ್ಕೆ ಮನ್ನಣೆ ನೀಡಿದ ಪಕ್ಷದ ನಾಯಕರು ಈ ಬಾರಿಯ ಸರಕಾರದಲ್ಲಿ ಮೊದಲ ಎರಡು ವರ್ಷಗಳಿಗೆ ಸ್ಪೀಕರ್ ಹುದ್ದೆಯನ್ನು ಅಲಂಕರಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಪಕ್ಷದ ನಾಯಕರ ಕೇಳಿಕೆಗೆ ಖಾದರ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಖಾದರ್ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿ ನಾಳೆಯಿಂದಲೇ ಸದನದ ಗೌರವದ ಹುದ್ದೆಯಾಗಿರುವ ಸ್ಪೀಕರ್ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ಪಕ್ಷದ ಒಳಗಿನಿಂದ ಲಭ್ಯವಾಗುತ್ತಿದೆ.
0 comments:
Post a Comment