ರಾಜ್ಯದಲ್ಲಿ ಎಂ.ಎಲ್.ಎ. ಚುನಾವಣೆ ಮುಗಿಯುತ್ತಲೇ ಇದೀಗ ಆಯೋಗದಿಂದ ಎಂ.ಎಲ್ಸಿ ಚುನಾವಣೆಗೆ ಸಿದ್ದತೆ : ಶೀಘ್ರದಲ್ಲೇ ಅಧಿಸೂಚನೆ ಸಾಧ್ಯತೆ - Karavali Times ರಾಜ್ಯದಲ್ಲಿ ಎಂ.ಎಲ್.ಎ. ಚುನಾವಣೆ ಮುಗಿಯುತ್ತಲೇ ಇದೀಗ ಆಯೋಗದಿಂದ ಎಂ.ಎಲ್ಸಿ ಚುನಾವಣೆಗೆ ಸಿದ್ದತೆ : ಶೀಘ್ರದಲ್ಲೇ ಅಧಿಸೂಚನೆ ಸಾಧ್ಯತೆ - Karavali Times

728x90

26 May 2023

ರಾಜ್ಯದಲ್ಲಿ ಎಂ.ಎಲ್.ಎ. ಚುನಾವಣೆ ಮುಗಿಯುತ್ತಲೇ ಇದೀಗ ಆಯೋಗದಿಂದ ಎಂ.ಎಲ್ಸಿ ಚುನಾವಣೆಗೆ ಸಿದ್ದತೆ : ಶೀಘ್ರದಲ್ಲೇ ಅಧಿಸೂಚನೆ ಸಾಧ್ಯತೆ

 ಬೆಂಗಳೂರು,‌ ಮೇ 27, 2023 (ಕರಾವಳಿ ಟೈಮ್ಸ್) :  ವಿಧಾನಸಭೆ ಚುನಾವಣೆ ಮುಗಿದು ಇನ್ನೇನು ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ಅಸ್ತಿತ್ವ ಕಾಣುವ ಹೊತ್ತಿಗೆ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಏಳು ಸ್ಥಾನಗಳ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದೆ.  ನಾಮ ನಿರ್ದೇಶಿತ ಎರಡು ಸ್ಥಾನಗಳನ್ನು ಹೊರತುಪಡಿಸಿದರೆ ಉಳಿದ ಐದು ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಿದ್ದತೆ ನಡೆಸುತ್ತಿದೆ.

ಕಾಂಗ್ರೆಸ್‌ ಪಕ್ಷದ ನಾಮನಿರ್ದೇಶಿತ ಸದಸ್ಯರಾದ ಮೋಹನ್‌ ಕುಮಾರ್‌ ಕೊಂಡಜ್ಜಿ ಹಾಗೂ ಪಿ ಆರ್‌ ರಮೇಶ್‌ ಅವರ ಎಂ ಎಲ್ ಸಿ ಅವಧಿ ಮೇ 17ಕ್ಕೆ ಕೊನೆಗೊಂಡಿದ್ದು, ಈ ಸ್ಥಾನಗಳಿಗೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ನಾಮನಿರ್ದೇಶನ ಮಾಡಬೇಕಿದೆ. ಉಳಿದಂತೆ ವಿಧಾನ ಸಭೆಯಿಂದ ಪರಿಷತ್ತಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಬಾಬುರಾವ್‌ ಚಿಂಚನಸೂರು, ಆರ್‌ ಶಂಕರ್‌ ಹಾಗೂ ಲಕ್ಷ್ಮಣ ಸವದಿ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್‌ ಅವರುಗಳು ತಮ್ಮ ಸದಸ್ಯತ್ವ ಅವಧಿಗೆ ಮುಂಚಿತವಾಗಿಯೇ   ರಾಜೀನಾಮೆ ನೀಡಿರುವುದರಿಂದ ಈ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.

ಬಾಬುರಾವ್‌ ಚಿಂಚನಸೂರು ಹಾಗೂ ಆಯನೂರು ಮಂಜುನಾಥ್‌ ಅವರ ಸದಸ್ಯತ್ವ ಅವಧಿ ಮುಂದಿನ ವರ್ಷ ಜೂನ್‌ ಮೂರನೇ ವಾರದವರೆಗೆ ಊರ್ಜಿತದಲ್ಲಿತ್ತು. ಆರ್‌ ಶಂಕರ್‌ ಹಾಗೂ ಪುಟ್ಟಣ್ಣ ಅವರ ಸದಸ್ಯತ್ವ ಅವಧಿ ಮೂರು ವರ್ಷ ಮತ್ತು ಲಕ್ಷ್ಮಣ ಸವದಿ ಅವರ ಸದಸ್ಯತ್ವ ಅವಧಿ ಐದು ವರ್ಷ ಬಾಕಿ ಇತ್ತು. ಈ ಸ್ಥಾನಗಳು ಖಾಲಿ ಇರುವ ಬಗ್ಗೆ ಈಗಾಗಲೇ ವಿಧಾನ ಪರಿಷತ್‌ ಸಚಿವಾಲಯ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಶೀಘ್ರದಲ್ಲೇ ಖಾಲಿ ಇರುವ ಐದು ಕ್ಷೇತ್ರಗಳಿಗೆ ಚುನಾವಣೆ ನಡೆಸುವ ಬಗ್ಗೆ ಆಯೋಗ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

ಮುಂದಿನ ಜೂನ್‌ 21ಕ್ಕೆ ಸದಸ್ಯತ್ವ ಕೊನೆಗೊಳ್ಳುವ ಪದವೀಧರ ಕ್ಷೇತ್ರ ಹಾಗೂ 2026 ನವೆಂಬರ್‌ 11ಕ್ಕೆ ಕೊನೆಗೊಳ್ಳುವ ಶಿಕ್ಷಕರ ಕ್ಷೇತ್ರದ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಒಂದು ವರ್ಷದ ಸದಸ್ಯತ್ವಕ್ಕಾಗಿ ಪದವೀಧರ ಕ್ಷೇತ್ರದ ಚುನಾವಣಾ ಕಣಕ್ಕೆ ಯಾರು ಇಳಿಯುತ್ತಾರೆ ಎಂಬುದು ಸದ್ಯ ಕುತೂಹಲಕಾರಿಯಾಗಿದೆ.

ವಿಧಾನ ಸಭೆಯಿಂದ ಮೇಲ್ಮನೆ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಗೆಲ್ಲಲು ಸೂತ್ರದ ಪ್ರಕಾರ 56 ಮತಗಳು ಬೇಕು. ವಿಧಾನ ಸಭೆಯಲ್ಲಿ ಪಕ್ಷಗಳ ಬಲಾಬಲದ ಮೇಲೆ ಲೆಕ್ಕಾಚಾರ ಹಾಕಿದರೆ ಕಾಂಗ್ರೆಸ್‌ ಸುಲಭವಾಗಿ ಎರಡು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲಲು ಸಾಧ್ಯವಿದೆ.

ಮುಂದಿನ ತಿಂಗಳು 8ಕ್ಕೆ ಕಾಂಗ್ರೆಸ್‌ ನಾಮನಿರ್ದೇಶಿತ ಸದಸ್ಯ ಸಿ ಎಂ ಲಿಂಗಪ್ಪ ಅವರ ಸದಸ್ಯತ್ವ ಅವಧಿ ಸಹ ಮುಗಿಯಲಿರುವುದರಿಂದ ಸರರ್ಕರ ಮೂರು ನಾಮನಿರ್ದೇಶಿತ ಸ್ಥಾನಗಳನ್ನು ಭರ್ತಿ ಮಾಡಬೇಕಾಗುತ್ತದೆ.

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಎಂ.ಎಲ್.ಎ. ಚುನಾವಣೆ ಮುಗಿಯುತ್ತಲೇ ಇದೀಗ ಆಯೋಗದಿಂದ ಎಂ.ಎಲ್ಸಿ ಚುನಾವಣೆಗೆ ಸಿದ್ದತೆ : ಶೀಘ್ರದಲ್ಲೇ ಅಧಿಸೂಚನೆ ಸಾಧ್ಯತೆ Rating: 5 Reviewed By: karavali Times
Scroll to Top