ಬಂಟ್ವಾಳ, ಮೇ 05, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಬೈಪಾಸ್ ಜಂಕ್ಷನ್ನಿನಿಂದ ಬಂಟ್ವಾಳ ಪೇಟೆವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಶಾಸಕ, ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಗುರುವಾರ ಮತಯಾಚನೆ ನಡೆಸಿದರು.
ಬಳಿಕ ಮಾತನಾಡಿದ ಅವರು ಗೌರವಯುತವಾದ ಮತ್ತು ಶಾಂತಿಯುತ ಬದುಕಿಗಾಗಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಬಂಟ್ವಾಳ ಕ್ಷೇತ್ರದಲ್ಲಿ 2 ಸಾವಿರಕ್ಕಿಂತಲೂ ಅಧಿಕ ಅನುದಾನದ ಮೂಲಕ ಸರ್ವ ವ್ಯಾಪಿ ಮತ್ತು ಸರ್ವಸ್ಪರ್ಶಿಯಾದ ಅಭಿವೃದ್ಧಿ ಮಾಡಿದ್ದೇನೆ ಎಂಬ ಸಂತೋಷ ಇದೆ, ಅಭಿವೃದ್ಧಿ ಜೊತೆಗೆ ಶಾಂತಿಯುತ ಬಂಟ್ವಾಳವಾಗಿ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರಿದಾಸ್, ರಾಜ್ಯ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ನಿಗಮದ ನಿರ್ದೇಶಕಿ ಸುಲೋಚನ ಜಿ ಕೆ ಭಟ್, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಪ್ರಕಾಶ್ ಅಂಚನ್, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಸುರೇಶ್ ಕುಲಾಲ್, ದಿನೇಶ್ ಭಂಡಾರಿ, ಮಾದವ ಮಾವೆ, ಉದಯಕುಮಾರ್ ರಾವ್, ಗೋವಿಂದ ಪ್ರಭು, ಶ್ರೀಧರ್ ಶೆಟ್ಟಿ ಪುಳಿಂಚ, ಪ್ರಭಾಕರ ಪ್ರಭು, ರಂಜಿತ್ ಮೈರ, ವಿವೇಕ್ ಶೆಟ್ಟಿ ನಗ್ರಿಗುತ್ತು, ಶರ್ಮಿತ್ ಜೈನ್, ಮೋಹನ್ ಪಿ ಎಸ್, ಯಶೋಧರ ಕರ್ಬೆಟ್ಟು, ರಾಜಾರಾಂ ನಾಯಕ್, ಚಂದ್ರಶೇಖರ್ ಪೂಜಾರಿ ಅಗ್ರಹಾರ್, ರಮಾನಾಥ ಪೈ, ಲಕ್ಮೀನಾರಾಯಣ, ನಾರಾಯಣ ಕುಲಾಲ್ ಭಂಡಾರಿಬೆಟ್ಟು, ಭಾರತಿ ಚೌಟ, ಮೀನಾಕ್ಷಿ ಕೆ ಗೌಡ, ರೇಖಾ ಪೈ, ಶಶಿಕಲಾ, ಗೋಪಾಲ ಸುವರ್ಣ, ಗುರುದತ್ ನಾಯಕ್, ಸುಪ್ರೀತ್ ಆಳ್ವ, ಚರಣ್ ಜುಮಾದಿಗುಡ್ಡೆ, ಪುರುಷೋತ್ತಮ ಶೆಟ್ಟಿ, ಜನಾರ್ದನ ಬೊಂಡಾಲ, ರೋಶನ್ ಡಿ’ಸೋಜ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment