ಬಂಟ್ವಾಳ, ಮೇ 30, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಸ್ಪೀಕರ್, ಮಂಗಳೂರು ಶಾಸಕ ಯು ಟಿ ಖಾದರ್ ಅವರು ಮತ್ತೊಮ್ಮೆ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ನಿವಾಸದಲ್ಲಿ ಸೋಮವಾರ ಸಂಜೆ ಭೇಟಿಯಾದರು.
ಚುನಾವಣಾ ಪೂರ್ವದಲ್ಲಿ ಖಾದರ್ ಅವರು ಪೂಜಾರಿ ಅವರ ಮನೆಗೆ ಬಂದು ಆಶೀರ್ವಾದ ಪಡೆದಿದ್ದರು. ಬಳಿಕ ಚುನಾವಣೆಯಲ್ಲಿ ಜಯಗಳಿಸಿದ ಬಳಿಕವೂ ಇತ್ತೀಚೆಗೆ ಖಾದರ್ ಅವರು ಪೂಜಾರಿ ಅವರನ್ನು ಭೇಟಿ ಮಾಡಿದ್ದರು. ಇದೀಗ ವಿಧಾನಸಭಾ ಸ್ಪೀಕರ್ ಆಗಿ ನೇಮಕಗೊಂಡ ಬಳಿಕ ಮತ್ತೊಮ್ಮೆ ಸೋಮವಾರ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ಸಂದರ್ಭ ಖಾದರ್ ಅವರ ಕಾರ್ಯವೈಖರಿ ಹಾಗೂ ರಾಜಕೀಯ ನಡೆಯ ಬಗ್ಗೆ ಜನಾರ್ದನ ಪೂಜಾರಿ ಅವರು ಬಣ್ಣಿಸಿದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಈಶ್ವರ್ ಉಳ್ಳಾಲ್, ಮಹಮದ್ ಮೋನು, ಸದಾಶಿವ ಉಳ್ಳಾಲ್, ದೀಪಕ್ ಪಿಲಾರ್, ಹಾಶೀರ್ ಪೆರಿಮಾರ್, ದಿನೇಶ್ ಪೂಜಾರಿ, ಪುರುಷೋತ್ತಮ ಶೆಟ್ಟಿ ಮೊದಲಾದವರು ಜೊತೆಗಿದ್ದರು.
0 comments:
Post a Comment