ಬಂಟ್ವಾಳ, ಮೇ 09, 2023 (ಕರಾವಳಿ ಟೈಮ್ಸ್) : ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ತರಿಕಿಟ ಕಲಾ ಕಮ್ಮಟ ಇದರ ಇಪ್ಪತ್ತು ವರ್ಷದ ಸಂಭ್ರಮಾಚರಣೆಯ ಸಲುವಾಗಿ ಪೆರಿಯೋಡು ಬೀಡುವಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಇದೇ ಸಂದರ್ಭ ಸಿನಿಮಾ ಕಲಾ ನಿರ್ದೆಶಕ ಶಶಿಧರ ಬೆಂಗಳೂರು, ಕೆವಿಜಿ ಉಪನ್ಯಾಸಕಿ ಮೀನಾ ಸುಳ್ಯ, ಉಮಾಶಂಕರ್ ಪೆರಿಯೋಡಿ, ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕವಿತಾ ಯಾದವ್ ಉಪಸ್ಥಿತರಿದ್ದರು.
ಜಾಜಿ, ಪೂರ್ವ, ಸ್ವರ, ದಕ್ಷ, ನೇಹ, ಅನಿರುದ್ಧ, ಅಭಿಲಾಷರವರ ಪ್ರವಾಸದ ಅನುಭವ ಕವಲಕ್ಕಿ ಪುಸ್ತಕವನ್ನು ಬಿಡುಗಡೆ ಮತ್ತು ವಾಣಿ ಪೆರಿಯೋಡಿ ಬರೆದ ಮೊಟ್ಟೆ ಆಮ್ಲೆಟ್ ಮಾಡುವಾ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಪ್ರಿಯಾಂಶು ಮತ್ತು ಮಲ್ಲಿಕಾ ಜ್ಯೋತಿಗುಡ್ಡೆರವರು ಮಕ್ಕಳಿಗೆ ಹಾಡು ಕಲಿಸಿದರು. ತೃಪ್ತಿ ಪೆರ್ಲಾಪು ಒರಿಗಾಮ್ ತರಬೇತಿ ನೀಡಿದರು. ಕು ಇಂದು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment