ಬೆಂಗಳೂರು, ಮೇ 22, 2023 (ಕರಾವಳಿ ಟೈಮ್ಸ್) : ಈಗಾಗಲೇ ಕೇಂದ್ರ ಸರಕಾರ ರಾಜ್ಯದಲ್ಲಿ 5 ಕೆ ಜಿ ಅಕ್ಕಿ ನೀಡುತ್ತಿದೆ. ಇದಕ್ಕೆ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡುತ್ತೀರಾ ಅಥವಾ ಕೇಂದ್ರದ 5 ಕೆಜಿ ಗೆ ಕೇವಲ 5 ಕೆಜಿ ಸೇರಿಸಿ 10 ಕೆಜಿ ಕೊಡುತ್ತೀರೋ ಎಂಬುದನ್ನು ರಾಜ್ಯ ಸರಕಾರ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಡಾ ಸಿ ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರೆಂಟಿಗಳನ್ನು ಕಾಂಗ್ರೆಸ್ ಚುನಾವಣಾಪೂರ್ವದಲ್ಲಿ ನಿಡಿತ್ತು. ಸರಕಾರ ಬಂದರೆ ಮೊದಲ ಕ್ಯಾಬಿನೆಟ್ ನಲ್ಲೇ ಅದನ್ನು ಜಾರಿ ಮಾಡುತ್ತೇವೆ ಎಂದಿದ್ದರು. ಇದೀಗ ಮುಂದಿನ ಕ್ಯಾಬಿನೆಟ್ ನಲ್ಲಿ ಅಂತಿದ್ದಾರೆ. ಈಗ ತಾತ್ವಿಕ ಒಪ್ಪಿಗೆ ಅಂತಿದ್ದೀರಾ, ಹಾಗಿದ್ದರೆ ರಾಹುಲ್ ಗಾಂಧಿ ಕೈಯಲ್ಲಿ ಯಾಕೆ ಮೊದಲ ಕ್ಯಾಬಿನೆಟ್ ಜಾರಿ ಮಾಡ್ತೀವಿ ಅಂತ ಹೇಳಿಸಿದ್ದೀರಿ. ಒಂದು ತಿಂಗಳು ಸಮಯ ತಗೊಳ್ಳಬಹುದಿತ್ತಲ್ಲಾ ಎಂದು ಅಶ್ವಥ್ ನಾರಾಯಣ ಪ್ರಶ್ನಿಸಿದ್ದಾರೆ.
ಸೋಮವಾರ ನಗರದಲ್ಲಿ ಸುರಿದ ಅಕಾಲಿಕ ಮಳೆ ಬಗ್ಗೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ, ಅಕಾಲಿಕ ಮಳೆಯಿಂದ ಮಾವು ಬೆಳೆ ಹಾನಿಯಾಗಿದೆ. ರಾಮನಗರ, ಕೋಲಾರ ಸೇರಿ ಹಲವು ಜಿಲ್ಲೆಗಳಲ್ಲಿ ಮಾವು ಬೆಳೆ ಹಾನಿಯಾಗಿದೆ. ಈ ಬಾರಿ ಫಸಲು ಕಡಿಮೆ ಬಂದಿದೆ. ಕಡಿಮೆ ಫಸಲು ಬಂದು ನಿನ್ನೆ ಮಳೆಯಿಂದ ಬೆಳೆ ಹಾನಿ ಆಗಿದೆ. ಈಗ ಮಾವು ಬೆಳೆಗಾರರಿಗೆ ನಷ್ಟ ಆಗಿದೆ. ಪ್ರತಿ ಟನ್ ಮಾವಿಗೆ 45-50 ಸಾವಿರ ಇತ್ತು. ಈಗ ಇಷ್ಟು ಹಣ ರೈತರಿಗೆ ಲಾಸ್ ಆಗುತ್ತೆ. ಕೂಡಲೇ ಮಾವು ಬೆಳೆಗಾರರಿಗೆ ಸರಕಾರ ಪರಿಹಾರ ನೀಡಬೇಕು. ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಬೇಕು ಎಂದವರು ಆಗ್ರಹಿಸಿದರು.
0 comments:
Post a Comment