ರಾಜ್ಯದ ನೂತನ ಪೊಲೀಸ್ ಡಿಜಿ-ಐಜಿಪಿಯಾಗಿ ಡಾ ಅಲೋಕ್ ಮೋಹನ್ ಅವರನ್ನು ನೇಮಿಸಿ ಸಿದ್ದು ಸರಕಾರ ಆದೇಶ - Karavali Times ರಾಜ್ಯದ ನೂತನ ಪೊಲೀಸ್ ಡಿಜಿ-ಐಜಿಪಿಯಾಗಿ ಡಾ ಅಲೋಕ್ ಮೋಹನ್ ಅವರನ್ನು ನೇಮಿಸಿ ಸಿದ್ದು ಸರಕಾರ ಆದೇಶ - Karavali Times

728x90

20 May 2023

ರಾಜ್ಯದ ನೂತನ ಪೊಲೀಸ್ ಡಿಜಿ-ಐಜಿಪಿಯಾಗಿ ಡಾ ಅಲೋಕ್ ಮೋಹನ್ ಅವರನ್ನು ನೇಮಿಸಿ ಸಿದ್ದು ಸರಕಾರ ಆದೇಶ

ಬೆಂಗಳೂರು, ಮೇ 21, 2023 (ಕರಾವಳಿ ಟೈಮ್ಸ್) : ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ-ಐಜಿಪಿ) ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಡಿಜಿಪಿ ಡಾ ಅಲೋಕ್ ಮೋಹನ್ ಅವರನ್ನು ನೇಮಕ ಮಾಡಿ ಸಿದ್ದರಾಮಯ್ಯ ನೇತೃತ್ವದ ನೂತನ ಸರಕಾರ ಶನಿವಾರ ಆದೇಶ ಹೊರಡಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರನ್ನು ಇತ್ತೀಚೆಗೆ ಕೇಂದ್ರ ಸರಕಾರ ಸಿಬಿಐ ನಿರ್ದೇಶಕರಾಗಿ ನೇಮಕಗೊಳಿಸಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಅಲೋಕ್ ಮೋಹನ್ ಅವರನ್ನು ಇದೀಗ ರಾಜ್ಯ ಸರಕಾರ ನೇಮಿಸಿದೆ.

ಅಲೋಕ್ ಮೋಹನ್ ಅವರು 1987 ರ ಬ್ಯಾಚ್ ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ಸೇವಾ ಜೇಷ್ಠತೆ ಆಧಾರದಲ್ಲಿ ಅವರನ್ನೇ ಸಿದ್ದು ಸರಕಾರ ಡಿಜಿ-ಐಜಿಪಿ ಹುದ್ದೆಗೆ ಪರಿಗಣಿಸಿದೆ. ಗೃಹ ರಕ್ಷಕ ದಳದ ರಾಜ್ಯ ಪೊಲೀಸ್ ಮಹಾನಿರ್ದೇಶಕರರಾದ ಡಾ ಅಲೋಕ್ ಮೋಹನ್ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಮೇ 22ರಿಂದ ಪೊಲೀಸ್ ಮಹಾ ನಿರ್ದೇಶಕರಾಗಿ ಅಲೋಕ್ ಮೋಹನ್ ಅಧಿಕಾರ ವಹಿಸಲಿದ್ದಾರೆ.

ಬಿಹಾರ ಮೂಲದ ಡಾ ಅಲೋಕ್ ಮೋಹನ್ ಅವರು 1987ನೆ ಬ್ಯಾಚ್‍ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸದ್ಯ ಹಾಲಿ ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳ ಡಿಜಿಪಿಯಾಗಿದ್ದಾರೆ. ಈ ಹಿಂದೆ ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇವಾ ಜೇಷ್ಠತೆ ಆಧಾರದಲ್ಲಿ ಡಿಜಿ-ಐಜಿ ಹುದ್ದೆಯ ಆಯ್ಕೆಯಾಗಿದ್ದಾರೆ. 2025ರ ಎಪ್ರಿಲ್‍ನಲ್ಲಿ ಸೇವೆಯಿಂದ ಅವರು ನಿವೃತ್ತರಾಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದ ನೂತನ ಪೊಲೀಸ್ ಡಿಜಿ-ಐಜಿಪಿಯಾಗಿ ಡಾ ಅಲೋಕ್ ಮೋಹನ್ ಅವರನ್ನು ನೇಮಿಸಿ ಸಿದ್ದು ಸರಕಾರ ಆದೇಶ Rating: 5 Reviewed By: karavali Times
Scroll to Top