ಮಂಗಳೂರು, ಮೇ 10, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 75.87 ಮಂದಿ ತಮ್ಮ ಪರಮಾಧಿಕಾರ ಚಲಾಯಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿಯಂತೆ ಅತೀ ಹೆಚ್ಚು ಮತದಾನ ಬೆಳ್ತಂಗಡಿಯಲ್ಲಿ ದಾಖಲಾಗಿದ್ದು, 80.33 ಶೇಕಡಾ ಮತ ಚಲಾವಣೆಯಾಗಿದೆ. ಉಳಿದಂತೆ ಬಂಟ್ವಾಳದಲ್ಲಿ 80.27 ಶೇಕಡಾ, ಪುತ್ತೂರು ಕ್ಷೇತ್ರದಲ್ಲಿ 79.91 ಶೇಕಡಾ, ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 77.37 ಶೇಕಡಾ, ಸುಳ್ಯ ಕ್ಷೇತ್ರದಲ್ಲಿ 78.53 ಶೇಕಡಾ, ಮೂಡುಬಿದಿರೆ ಕ್ಷೇತ್ರದಲ್ಲಿ 76 ಶೇಕಡಾ, ಮಂಗಳೂರು ಉತ್ತರದಲ್ಲಿ 71.6 ಶೇಕಡಾ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 64.89 ಶೇಕಡಾ ಮತ ಚಲಾವಣೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 78.46 ಶೇಕಡಾ ಮತದಾನವಾಗಿದೆ. ಕಾರ್ಕಳ 81.30 ಶೇಕಡಾ, ಕುಂದಾಪುರದಲ್ಲಿ 78.94 ಶೇಕಡಾ, ಕಾಪು ಕ್ಷೇತ್ರದಲ್ಲಿ 78.79 ಶೇಕಡಾ, .ಬೈಂದೂರಿನಲ್ಲಿ 77.84 ಶೇಕಡಾ ಹಾಗೂ ಉಡುಪಿ ಕ್ಷೇತ್ರದಲ್ಲಿ 75.87 ಶೇಕಡಾ ಮತದಾನವಾಗಿದೆ.
0 comments:
Post a Comment