ಬೆಳ್ತಂಗಡಿ, ಮೇ 14, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಳೆಂಜ ಗ್ರಾಮದ ಉಮಾಮಹೇಶ್ವರಿ ದೇವಸ್ಥಾನದ ಬಳಿಯ ಗ್ರಾಮ ಪಂಚಾಯತ್ ಕುಡಿಯುವ ನೀರಿನ ಟ್ಯಾಂಕಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪಂಜಾಬ್ ರಾಜ್ಯದ, ಬಟಾಲ ಜಿಲ್ಲೆ, ಕೃಷ್ಣನಗರ ನಿವಾಸಿ ಕನ್ವರ್ ಲುಹಾರ್ ಎಂಬವರ ಪುತ್ರ ಕಲು ಲುಹಾರ್ (47) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಕಳೆಂಜ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಎ ಪಿ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದ್ದು, ಶನಿವಾರ (ಮೇ 13) ಬೆಳಿಗ್ಗೆ ಸಂಜೀವ ಎಂಬವರಿಗೆ ಕಾಯರ್ತ್ತಡ್ಕ ಪೇಟೆಯಲ್ಲಿರುವ ನಳ್ಳಿ ನೀರಿನಲ್ಲಿ ಕೊಳೆತ ವಾಸನೆ ಬರುತ್ತಿರುವುದನ್ನು ಕಂಡು ದಿನೇಶ್ ಎಂಬವರೊಂದಿಗೆ ಕಳೆಂಜ ಗ್ರಾಮದ ಕಾಯರ್ತ್ತಡ್ಕ ಎಂಬಲ್ಲಿರುವ ಉಮಾಮಹೇಶ್ವರಿ ದೇವಸ್ಥಾನದ ಹತ್ತಿರ ಇರುವ ಪಂಚಾಯತಿಗೆ ಸಂಬಂದಪಟ್ಟ ನೀರಿನ ಟ್ಯಾಂಕಿನ ಬಳಿ ಹೋಗಿ ಟ್ಯಾಂಕ್ ಒಳಗಡೆ ನೋಡಿದಾಗ ಮನುಷ್ಯನ ಮೃತದೇಹವು ಕಂಡುಬಂದಿದೆ. ಈ ಬಗ್ಗೆ ನನಗೆ ಬಂದ ಮಾಹಿಯಂತೆ ಹೋಗಿ ನೋಡಿದಾಗ ಟ್ಯಾಂಕಿನಲ್ಲಿ ಮೃತದೇಹ ಕಂಡು ಬಂದಿದೆ.
ಈ ಬಗ್ಗೆ ವಿಚಾರಿಸಿದಾಗ ಕಾಯರ್ತ್ತಡ್ಕದಲ್ಲಿರುವ ಬ್ಲೂಬರ್ಡ್ ಎಂಬ ಬಾರಿನಲ್ಲಿ ಕೆಲಸ ಮಾಡಿಕೊಂಡಿರುವ ಕಲು ಲುಹಾರ್ ಎಂಬವರ ಮೃತದೇಹವಾಗಿದ್ದು, ಈತ ಎರಡು ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಕಳೆಂಜ ಪಂಚಾಯತಿಗೆ ಸಂಬಂದಪಟ್ಟ ನೀರಿನ ಟ್ಯಾಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 36/2023 ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment