ಬಂಟ್ವಾಳ, ಮೇ 22, 2023 (ಕರಾವಳಿ ಟೈಮ್ಸ್) : ಐದು ವರ್ಷಗಳ ಹಿಂದಿನ ಸಹೋದರಿಯ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ತಗಾದೆ ಎತ್ತಿದ ಸಹೋದರ ತನ್ನ ಸ್ನೇಹಿತನನ್ನೇ ಕೊಲೆಗೆ ಯತ್ನಿಸಿದ ಅದರಲ್ಲಿ ವಿಫಲನಾಗಿ ಆತನ ಕೈಯನ್ನು ಕಡಿದು ತುಂಡು ಮಾಡಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಮಂಡಾಡಿ ಎಂಬಲ್ಲಿ ಶನಿವಾರ (ಮೇ 20) ರಾತ್ರಿ ನಡೆದಿದೆ.
ಕೊಲೆಗೆ ಯತ್ನಿಸಿದ ಆರೋಪಿಯನ್ನು ಸಂತೋಷ್ ಎಂದು ಹೆಸರಿಸಲಾಗಿದ್ದು, ಹಲ್ಲೆಗೊಳಗಾದವ ಆತನ ಸ್ನೇಹಿತ ಶಿವರಾಜ್ ಕುಲಾಲ್ ಎಂಬಾತನಾಗಿದ್ದಾನೆ. ಶಿವರಾಜ್ ಕುಲಾಲ್ 5 ವರ್ಷಗಳ ಹಿಂದೆ ಆರೋಪಿ ಸಂತೋಷನ ಅಕ್ಕಳನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಅದಕ್ಕೆ ಮನೆಯವರು ಒಪ್ಪದಿದ್ದಾಗ ಶಿವರಾಜ್ ಕುಲಾಲ್ ಆ ವಿಚಾರವನ್ನು ಅಲ್ಲಿಗೆ ಬಿಟ್ಟು ಬಿಟ್ಟಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ವೈಯುಕ್ತಿಕ ದ್ವೇಷ ಕಟ್ಟಿಕೊಂಡು ಆರೋಪಿ ಸಂತೋಷ್ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.
ಶನಿವಾರ ರಾತ್ರಿ ಸುಮಾರು 12.45 ರ ವೇಳೆಗೆ ಸಂತೋಷ್ ಎಂಬಾತನ ಶಿವರಾಜಗೆ ಕರೆ ಮಾಡಿ ನಿನ್ನಲ್ಲಿ ಮಾತನಾಡಲು ಇದೆ, ಅರಬಿಗಡ್ಡೆ ಬಳಿ ಬರಲು ತಿಳಿಸಿದ್ದಾನೆ. ಮೊದಲು ಬರಲು ನಿರಾಕರಿಸಿದ ಶಿವರಾಜ್ ಬಳಿಕ ಸಂತೋಷನ ಬಲವಂತಕ್ಕೆ ಒಪ್ಪಿ ರಾತ್ರಿ ಸುಮಾರು 1 ಗಂಟೆ ವೇಳೆಗೆ ಅರಬಿಗುಡ್ಡೆ ಬಳಿ ಬಂದಿದ್ದಾನೆ. ಈ ಸಂದರ್ಭ ಸಂತೋಷ್ ಆತನ ಸಹೋದರಿಯ ವಿವಾಹಕ್ಕೆ ಸಂಬಂಧಿಸಿದ ಮಾತು ಆರಂಭಿಸಿದ್ದಾನೆ. ಈ ಸಂದರ್ಭ ಶಿವರಾಜ್ ಅದು ಐದು ವರ್ಷದ ಹಿಂದಿನ ವಿಷಯ ಅಲ್ವ ಎಂದು ಮಾತನಾಡಲು ನಿರಾಕರಿಸಿದ್ದಾನೆ. ಈ ಸಂದರ್ಭ ಮತ್ತೆ ಮಾತಿಗೆಳೆದ ಸಂತೋಷ್ ನಿನಗೆ ನನ್ನ ಅಕ್ಕನನ್ನು ಸಾಕಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿ ಕೈಯಲ್ಲಿದ್ದ ತಲವಾರನ್ನು ಬೀಸಿ ಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭ ಶಿವರಾಜ್ ತನ್ನ ಎಡಕೈ ಅಡ್ಡ ಹಿಡಿದ ಪರಿಣಾಮ ಕೈಯ ಮಣಿಗಂಟು ತುಂಡಾಗಿ ಕೆಳಕ್ಕೆ ಬಿದ್ದಿದೆ. ಇದನ್ನು ನೋಡಿದ ಆರೋಪಿ ಸಂತೋಷ್ ಪರಾರಿಯಾಗಿದ್ದಾನೆ.
ಬಳಿಕ ಶಿವರಾಜ್ ತನ್ನ ಸಹೋದರ ಹಾಗೂ ಸ್ನೇಹಿತನಿಗೆ ಕರೆ ಮಾಡಿ ಅವರ ಸಹಾಯದಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಸಂತೋಷನ ವಿರುದ್ದ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಭಾನುವಾರ (ಮೇ 21) ಅಪರಾಧ ಕ್ರಮಾಂಕ 48/2023 ಕಲಂ 324, 326, 307 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment