ಬಂಟ್ವಾಳ, ಮೇ 01, 2023 (ಕರಾವಳಿ ಟೈಮ್ಸ್) : ಎಂಭತ್ತು ವರ್ಷ ಮೇಲ್ಪಟ್ಟ ಹಾಗೂ ಭಿನ್ನ ಚೇತನ ಮತದಾರರಿಗೆ ಮನೆಯಲ್ಲೇ ಮತದಾನ ಮಾಡುವ ಚುನಾವಣಾ ಆಯೋಗದ ನಿರ್ದೇಶನದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ 25 ಸೆಕ್ಟರ್ ವ್ಯಾಪ್ತಿಯಲ್ಲಿ ಅಂಚೆ ಮತದಾನ ತಂಡಗಳು ಇಂದು (ಸೋಮವಾರ-ಮೇ 01) ಬೆಳಿಗ್ಗೆ ಮತದಾರರ ಮನೆಗಳಿಗೆ ತೆರಳಿದವು.
ಓರ್ವ ಮೈಕ್ರೋ ವೀಕ್ಷಕರು, ಇಬ್ಬರು ಪೆÇೀಲಿಂಗ್ ಅಧಿಕಾರಿಗಳು, ಓರ್ವ ವೀಡಿಯೋ ಗ್ರಾಫರ್ ಹಾಗೂ ಪೆÇಲೀಸ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಿಬ್ಬಂದಿಗಳ ತಂಡವು ಪ್ರತಿ ಅರ್ಹ ಮತದಾದರರ ಮನೆಗೆ ತೆರಳಿ ಮನೆಯಿಂದಲೇ ಮತದಾನ ಮಾಡಿಸುವ ಸಲುವಾಗಿ ಈ ಕ್ರಮವನ್ನು ಆಯೋಗವು ಜಾರಿ ಮಾಡಿದೆ.
ಬಂಟ್ವಾಳ ವ್ಯಾಪ್ತಿಯಲ್ಲಿ ಚುನಾವಣಾ ತಂಡಗಳನ್ನು ಅಗತ್ಯ ನಿರ್ದೇಶನ ನೀಡಿ ಇಂದು ಬೆಳಿಗ್ಗೆ ಕಳುಹಿಸಿಕೊಡಲಾಯಿತು. ಈ ಸಂದರ್ಭ ಚುನಾವಣಾಧಿಕಾರಿ ಆಬಿದ್ ಗದ್ಯಾಲ್, ಸಹಾಯಕ ಚುನಾವಣಾ ಅಧಿಕಾರಿ ಕೂಡಲಿಗಿ, ನೋಡಲ್ ಅಧಿಕಾರಿ ಸುನಿತಾ ಕುಮಾರಿ, ಮಾಸ್ಟರ್ ಟ್ರೈನರ್ ಅಬ್ದುಲ್ ರಝಾಕ್, ಉಪತಹಶೀಲ್ದಾರ್ ಗಳಾದ ನವೀನ್ ಕುಮಾರ್, ರಾಜೇಶ್ ನಾಯ್ಕ್ , ನರೇಂದ್ರ ನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
0 comments:
Post a Comment