ಬಂಟ್ವಾಳ, ಮೇ 01, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಅವರ ಪರವಾಗಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ವಾರ್ಡ್ ಸಂಖ್ಯೆ 24 ರಲ್ಲಿ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರ ನೇತೃತ್ವದಲ್ಲಿ ಸೋಮವಾರ (ಮೇ 1) ಬಿರುಸಿನ ಪ್ರಚಾರ ಹಾಗೂ ಮತಯಾಚನೆ ನಡೆಸಲಾಯಿತು.
ಬಂಟ್ವಾಳ ಎಂದರೆ ರಮಾನಾಥ ರೈ, ರಮಾನಾಥ ರೈ ಎಂದರೆ ಬಂಟ್ವಾಳ. ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ದಿ ಆಗಿರುವುದು ರಮಾನಾಥ ರೈ ಅವರಿಂದಲೇ, ಇನ್ನು ಮುಂದಕ್ಕೂ ಉಳಿದ ಅಭಿವೃದ್ದಿ ಕಾರ್ಯಗಳು ಆಗಬೇಕಿರುವುದು ರಮಾನಾಥ ರೈ ಅವರಿಂದಲೇ. ರಮಾನಾಥ ರೈ ಹೊರತುಪಡಿಸಿದ ಪ್ರತಿನಿಧಿಗಳಿಂದ ಯಾವ ರೀತಿಯ ಅಭಿವೃದ್ದಿ ಸಾಧ್ಯವಿದೆ ಎಂದು ಎರಡು ಮೂರು ಅವಧಿಗಳಲ್ಲಿ ಸಾಬೀತಾಗಿದೆ. ರಮಾನಾಥ ರೈ ಇಲ್ಲದ ಅವಧಿಗಳಲ್ಲಿ ಬಂಟ್ವಾಳ ಅಕ್ಷರಶಃ ಅನಾಥ ಸ್ಥಿತಿಯನ್ನೇ ಎದುರಿಸಿದೆ. ಯಾವುದೇ ಅಭಿವೃದ್ದಿ ಕಾರ್ಯಗಳಿಲ್ಲದೆ ಸೊರಗಿ ಹೋಗಿದೆ. ಕೇವಲ ಬ್ಯಾನರ್ ಹಾಗೂ ಬಿಟ್ಟಿ ಪ್ರಚಾರಗಳಿಗೆ ಮಾತ್ರ ಕಾಂಗ್ರೆಸ್ಸೇತರ ಪ್ರತಿನಿಧಿಗಳು ಬಂಟ್ವಾಳದಲ್ಲಿ ಸೀಮಿತಗೊಂಡಿದ್ದಾರೆ ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಬಂಟ್ವಾಳ ಬೆಳಗಬೇಕಾದರೆ ರಮಾನಾಥ ರೈಗಳು ಶಾಸಕರು, ಮಂತ್ರಿಗಳು ಆಗಲೇಬೇಕಾದ ಅನಿವಾರ್ಯತೆ ಸೃಷ್ಟಿಸಿಯಾಗಿದೆ. ಸರ್ವ ಮತದಾರ ಬಂಧುಗಳು ಈ ಒಂದು ಅನಿವಾರ್ಯತೆಯನ್ನು ಮನಗಂಡು ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ, ಅಭಿವೃದ್ದಿಯ ರೂವಾರಿ, ನವಬಂಟ್ವಾಳದ ನಿರ್ಮಾತೃ, ಮಾಜಿ ಸಚಿವ, ಭ್ರಷ್ಟಾಚಾರ ರಹಿತ, ಸ್ವಚ್ಛ, ಶುಭ್ರ ರಾಜಕಾರಣಿ, ಬಡವರ ಬಂಧು, ಸದಾ ಜನರ ನಡುವೆ 24*7 ಸಮಯದಲ್ಲಿ ಓಡಾಟದಲ್ಲಿರುವ ಬಿ ರಮಾನಾಥ ರೈ ಅವರ ಪರವಾಗಿ ಮತ ಚಲಾಯಿಸುವಂತೆ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಆಗ್ರಹಿಸಿದರು.
ಈ ಸಂದರ್ಭ ಬೂತ್ ಅಧ್ಯಕ್ಷ ಅಬ್ದುಲ್ ಮಜೀದ್, ಆಬಿದ್ ಬೋಗೋಡಿ, ಶಿಹಾಬುದ್ದೀನ್, ವಾಲ್ವಿನ್ ಡಿ’ಸೋಜ, ಸವಾನ್ ಬೋಗೋಡಿ, ಬಾತಿಷ್ ಬೋಗೋಡಿ, ಮುಹ್ಸಿನ್ ಬೋಗೋಡಿ, ರಿಝ್ವಾನ್ ಬೋಗೋಡಿ, ಸಲೀಂ ಬೋಗೋಡಿ, ಗಫೂರ್ ಬೋಗೋಡಿ, ಶಕೀರ್ ಬೋಗೋಡಿ ಮೊದಲಾದವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡರು.
0 comments:
Post a Comment