ಬಂಟ್ವಾಳ, ಮೇ 29, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ದ್ವಿತೀಯ ಬಾರಿಗೆ ಆಯ್ಕೆಯಾಗಿರುವ ಯು ರಾಜೇಶ್ ನಾಯ್ಕ್ ಅವರ ಶಾಸಕರ ಕಚೇರಿ ಹೊಸ ವಿನ್ಯಾಸಗೊಳಿಸಿದ ಬಳಿಕ ಸೋಮವಾರ ಬಿ ಸಿ ರೋಡಿನ ಸಾಮಥ್ರ್ಯ ಸೌಧದಲ್ಲಿ ಉದ್ಘಾಟನೆಗೊಂಡಿತು.
ಕಚೇರಿ ಉದ್ಘಾಟಿಸಿ ಮಾತನಾಡಿದ ಆರೆಸ್ಸೆಸ್ ಪ್ರಮುಖ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ ಅವರು, ರಾಜೇಶ್ ನಾಯ್ಕ್ ಅವರನ್ನು ಕ್ಷೇತ್ರದ ಜನ ಇಷ್ಟಪಟ್ಟ ಕಾರಣಕ್ಕಾಗಿ ದ್ವಿತೀಯ ಬಾರಿಗೆ ಅವರು ಆರಿಸಿ ಬಂದಿದ್ದಾರೆ. ಜನ ಅಪೇಕ್ಷೆ ಪಡುವವರೇ ನಾಯಕರಾಗಬೇಕು ಎಂದರು.
ಜನ ಇಷ್ಟ ಪಟ್ಟರೆ ಮಾತ್ರ ಯಾರಾದರೂ ನಾಯಕರಾಗುತ್ತಾರೆ ಹೊರತು ಜನರ ಮೇಲೆ ಹೊರಿಸಿದ ಕಾರಣಕ್ಕೆ ಅಲ್ಲ ಎಂಬುದು ರಾಜೇಶ್ ನಾಯಕ್ ಅವರ ಗೆಲುವಿನಿಂದ ಸಾಬೀತಾಗಿದೆ ಎಂದು ಕಲ್ಲಡ್ಕ ಭಟ್ ಅಭಿಪ್ರಾಯಪಟ್ಟರು.
ಇದೇ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು, ತಾನು ಕಳೆದ ಹತ್ತು ವರ್ಷಗಳಿಂದ ಜನರೊಂದಿಗಿದ್ದು ಕೆಲಸ ಮಾಡಿದ್ದೇನೆ. ಕಳೆದ ಬಾರಿ ಶಾಸಕನಾಗಿದ್ದೆ. ಈಗ ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಹಿರಿಯರ ಮಾರ್ಗದರ್ಶನ ಹಾಗೂ ಜನತೆಯ ಆಶೀರ್ವಾದದ ಮೂಲಕ ಕೆಲಸ ಮಾಡುತ್ತೇನೆ ಎಂದು ಭರವಸೆಯಿತ್ತರು.
ಈ ಸಂದರ್ಭ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕ ಎ ರುಕ್ಮಯ ಪೂಜಾರಿ, ಪಕ್ಷ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ ಕೆ ಭಟ್, ದೇವದಾಸ್ ಶೆಟ್ಟಿ, ಸುದರ್ಶನ ಬಜ, ರವೀಶ್ ಶೆಟ್ಟಿ ಕರ್ಕಳ, ಗೋವಿಂದ ಪ್ರಭು, ಮಾಧವ ಮಾವೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment