ಬಂಟ್ವಾಳ, ಮೇ 08, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಜಿಪಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣೋಲಿಬೈಲಿನಿಂದ ಬೊಳ್ಳಾಯಿವರೆಗೆ ಹಾಗೂ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಸಾಲೆತ್ತೂರುವರೆಗೆ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.
ಗ್ರಾಮಾಂತರ ಪ್ರದೇಶಗಳ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಈ ಬಾರಿ ಬಿಜೆಪಿಗೆ ಮತ ನೀಡಿ ನನ್ನನ್ನು ಅತ್ಯಧಿಕ ಅಂತರದಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಳೆದ ಬಾರಿಯ 2018ರ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಅಭೂತಪೂರ್ವವಾಗಿ ಸಾಧಿಸಿದ ಬಿಜೆಪಿಯ ಗೆಲುವು ಕಾರ್ಯಕರ್ತರ ಗೆಲುವಾಗಿದ್ದು ಬಳಿಕದ ದಿನಗಳಲ್ಲಿ ಪ್ರತಿಯೊಬ್ಬರು ಗೌರವದಿಂದ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಯಿತು. ಅದೇ ರೀತಿಯಲ್ಲಿ ಈ ಬಾರಿಯ 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಬಂಟ್ವಾಳದಲ್ಲಿ ಕಮಲವನ್ನು ಅರಳಿಸುವ ಮೂಲಕ ಕಾಂಗ್ರೆಸ್ ಮುಕ್ತ ಬಂಟ್ವಾಳವಾಗಿ ಮಾರ್ಪಾಡು ಮಾಡುವಂತೆ ಮನವಿ ಮಾಡಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಟ್ವಾಳದಲ್ಲಿ ಮತಯಾಚನೆ ನಡೆಸಿದ ಬಳಿಕ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದ್ದು, ಗೆಲುವಿಗೆ ಪೂರಕ ವಾತಾವರಣ ನಿರ್ಮಾವಾಗಿದೆ ಎಂದು ತಿಳಿಸಿದ ಅವರು ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರಗಳಿಗೆ ಬಿಜೆಪಿಯನ್ನು ಅತ್ಯಧಿಕ ಅಂತರಗಳ ಗೆಲುವಿನ ಮೂಲಕ ಉತ್ತರ ನೀಡಬೇಕು ಎಂದರು. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸುವ ಕಾರ್ಯ ಮಾಡಿದ್ದೇನೆ ಎಂದು ರಾಜೇಶ್ ನಾಯಕ್ ತಿಳಿಸಿದರು.
ಚುನಾವಣೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಾರ್ಯಕರ್ತರು ಮೈಮರೆಯದೆ ಮನೆ ಮನೆ ಬೇಟಿ ಮಾಡಿ ಮತಯಾಚನೆ ನಡೆಸಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಇದೇ ವೇಳೆ ಅವರು ಮನವಿ ಮಾಡಿದರು.
ಈ ಸಂದರ್ಭ ಬಂಟ್ವಾಳ ಬಿಜೆಪಿ ಆದ್ಯಕ್ಷ ದೇವಪ್ಪ ಪೂಜಾರಿ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮುಂಬಯಿ ಮಹಾನಗರ ಪಾಲಿಕೆ ಕಾಪೆರ್Çೀರೆಟರ್ ಸಂತೋಷ್ ಶೆಟ್ಟಿ ದಳಂದಿಲ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಕ್ಷ ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ ಸಜೀಪ, ಪ್ರವೀಣ್ ಗಟ್ಟಿ, ಸುಪ್ರೀತ್ ಆಳ್ವ, ಪುರುಷೋತ್ತಮ ಸಾಲಿಯಾನ್, ಉದಯ ಪೂಜಾರಿ ಕಾಂಜಿಲ, ಉದಯ ಕುಮಾರ್ ರಾವ್, ಚರಣ್ ಜುಮಾದಿಗುಡ್ಡೆ, ಯಶವಂತ ನಗ್ರಿ, ಲೋಹಿತ್ ಪನೋಲಿಬೈಲು, ವಿರೇಂದ್ರ ಕುಲಾಲ್, ಸೀತಾರಾಮ, ಪ್ರಶಾಂತ್ ಪೂಜಾರಿ, ಗಿರೀಶ್ ಕುಲಾಲ್, ಯೋಗೀಶ್ ಪೂಜಾರಿ, ಕೃಷ್ಣಭಟ್, ಸುರೇಶ್ ಪೂಜಾರಿ, ರವೀಶ್ ಶೆಟ್ಟಿ ಕರ್ಕಳ, ಮಾಧವ ಮಾವೆ, ಪುಷ್ಪರಾಜ್ ಚೌಟ, ಶಿವಪ್ರಸಾದ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಪುಷ್ಪಾ ಕಾಮತ್, ರಮೇಶ್ ರಾವ್ ಪತ್ತುಮುಡಿ, ಲೋಹಿತ್ ಅಗರಿ, ಬಾಲಕೃಷ್ಣ ಸೆರ್ಕಳ, ರಾಜೇಶ್ ಶೆಟ್ಟಿ ಮಂಚಿ, ಪ್ರಮೋದ್ ನೂಜಿಪ್ಪಾಡಿ, ರಾಜಾರಾಮ್ ಹೆಗ್ಡೆ, ಅಭಿಷೇಕ್ ರೈ, ಕೃಷ್ಣಪ್ರಸಾದ್ ಶೆಟ್ಟಿ, ಆನಂದ ಪೂಜಾರಿ, ವಿದ್ಯೇಶ್ ರೈ, ಶಂಕರ ಟೈಲರ್, ಹರೀಶ್ ಟೈಲರ್, ಪ್ರಶಾಂತ್ ಶೆಟ್ಟಿ ಅಗರಿ, ಕಿಶೋರ್ ದೇವಾಡಿಗ, ಅರವಿಂದ ರೈ, ನಾಗೇಶ್ ಶೆಟ್ಟಿ, ದೇವಿದಾಸ್ ಶೆಟ್ಟಿ ಪಾಲ್ತಾಜೆ, ವಿಜಯ ಕಾಮತ್, ಸತೀಶ್ ನಾಯ್ಕ್, ಜಗದೀಶ್ ರೈ ಪೆರ್ಲದಬೈಲು ಮೊದಲಾದವರಿದ್ದರು.
0 comments:
Post a Comment