ಬಂಟ್ವಾಳ ಕ್ಷೇತ್ರದಲ್ಲಿ 1,12,229 ಪುರುಷರು, 1,16,148 ಸ್ತ್ರೀಯರು ಸೇರಿ ಒಟ್ಟು 2,28,377 ಮಂದಿ ಮತದಾರರು
ಬಂಟ್ವಾಳ, ಮೇ 09, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯವು ಮಂಗಳವಾರ (ಮೇ 9) ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು, ಪ್ರತೀ ಮತಗಟ್ಟೆಗೆ 4 ಮತಗಟ್ಟೆ ಅಧಿಕಾರಿಗಳು, 1 ಗ್ರೂಪ್ ಡಿ, 1 ಪೆÇಲೀಸ್ ಹಾಗೂ 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಿಗೆ 1 ಹೆಚ್ಚವರಿ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿತ್ತು. 25 ಸೆಕ್ಟರ್ ಅಧಿಕಾರಿಗಳು ಮಸ್ಟರಿಂಗ್ ಕಾರ್ಯವನ್ನು ನಡೆಸಿಕೊಟ್ಟರು. ಗ್ರೂಪ್ ಡಿ ಮತ್ತು ಪೆÇಲೀಸ್ ಸಿಬ್ಬಂದಿಗಳನ್ನೂ ಒಳಗೊಂಡಂತೆ ಸುಮಾರು 1572 ಮಂದಿ ಚುನಾವಣಾ ಕರ್ತವ್ಯಕ್ಕಾಗಿ 25 ಬಸ್ಸುಗಳು, 26 ಮ್ಯಾಕ್ಸಿ ಕ್ಯಾಬ್, 22 ಮಿನಿ ಬಸ್, 20 ಜೀಪುಗಳಲ್ಲಿ ಮತಗಟ್ಟೆಗಳಿಗೆ ತೆರಳಿದರು.
ಮತಗಟ್ಟೆ ಅಧಿಕಾರಿಗಳು ಮತ್ತು ಕರ್ತವ್ಯನಿರತ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚುನಾವಣಾ ವೀಕ್ಷಕ ದೀಪಾಂಕರ್ ಸಿನ್ಹಾ, ಚುನಾವಣಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಚುನಾವಣಾಧಿಕಾರಿ ಎಸ್ ಬಿ ಕೂಡಲಗಿ, ಗ್ರೇಡ್ 2 ತಹಶೀಲ್ದಾರ್ ದಯಾನಂದ ಕೆ ಎಸ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಮಧು ಎಂ, ಚುನಾವಣಾ ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಉಪತಹಶೀಲ್ದಾರ್ ಗಳಾದ ನರೇಂದ್ರನಾಥ ಮಿತ್ತೂರು, ರಾಜೇಶ್ ನಾಯಕ್ ಎನ್ ಎಂ, ವಿಜಯ್ ವಿಕ್ರಂ, ದಿವಾಕರ ಮುಗುಲ್ಯ ಮಸ್ಟರಿಂಗ್ ಮೇಲುಸ್ತುವಾರಿ ವಹಿಸಿದ್ದರು.
ವಿವಿಧ ಇಲಾಖೆಗಳ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಉಪಸ್ಥಿತರಿದ್ದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 156 ಮತಗಟ್ಟೆಗಳನ್ನು ವೆಬ್ ಕಾಸ್ಟಿಂಗ್ ಗಾಗಿ ಆಯ್ಕೆ ಮಾಡಲಾಗಿರುತ್ತದೆ. 62 ಮತಗಟ್ಟೆಗಳಿಗೆ ಅರೆ ಸೇನಾ ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 5 ಮತಗಟ್ಟೆಗಳನ್ನು ‘ಸಖಿ’ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಹಾಗೆಯೇ 1 ಯಕ್ಷಗಾನ, 2 ಕಂಬಳ, 1 ನೀಲತರಂಗ, 1 ಪರಂಪರೆ, 1 ಗೋಗ್ರೀನ್, 1 ವಿಕಲಚೇತನ ಮತಗಟ್ಟೆಗಳಾಗಿ ಸ್ವೀಪ್ ಯೋಜನೆಯಡಿ ಗುರುತಿಸಲಾಗಿದ್ದು, ಸದರಿ ಮತಗಟ್ಟೆಗಳನ್ನು ಆಯಾ ವಿಷಯಕ್ಕೆ ಅನುಗುಣವಾಗಿ ಈಗಾಗಲೇ ವಿನ್ಯಾಸಗೊಳಿಸಲಾಗಿದೆ. ಪೂರ್ವಾಹ್ನ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಇರುತ್ತದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 1,12,229 ಮಂದಿ ಪುರುಷರು ಹಾಗೂ 1,16,148 ಮಂದಿ ಸ್ತ್ರೀಯರು ಸೇರಿದಂತೆ ಒಟ್ಟು 2,28,377 ಮಂದಿ ಮತದಾರರಿದ್ದಾರೆ ಎಂದು ಬಂಟ್ವಾಳ ಚುನಾವಣಾಧಿಕಾರಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment