ಮಂಗಳೂರು, ಮೇ 09, 2023 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ದಿನ ಸಮೀಪಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಅಕ್ರಮಗಳನ್ನು ತಡೆಯುವ ಹಾಗೂ ಕಾನೂನು ಬಾಹಿರ ವಸ್ತುಗಳ ಸಾಗಟವನ್ನು ತಡೆಯುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೇರಳ ಗಡಿ ಭಾಗದಲ್ಲಿರುವ ರಾಜ್ಯ ಪ್ರವೇಶಿಸಬಹುದಾದ 14 ಕಡೆಗಳಲ್ಲಿ (ಪೊರಸ್ ಪಾಯಿಂಟ್) ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳನ್ನು ನಿಯೋಜಿಸಿ, 8 ಅಂತರ ರಾಜ್ಯ ಚೆಕ್ ಪೊಸ್ಟ್ ಗಳಲ್ಲಿ ಕೇರಳ ರಾಜ್ಯ ಪೊಲೀಸ್ ಸಹಯೋಗದಲ್ಲಿ ಕೇರಳ ಪೊಲೀಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಹಾಗೂ ಅಂತಹ ಗಡಿಪ್ರದೇಶ ಹಾಗೂ ಚೆಕ್ ಪೊಸ್ಟ್ ಪ್ರದೇಶಗಳಲ್ಲಿ ಕೇರಳ ರಾಜ್ಯ ಪೊಲೀಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಿಬ್ಬಂದಿಗಳು ಸೇರಿ ಜಂಟಿ ಪೆಟ್ರೋಲಿಂಗ್ ನಡೆಸುವ ಮೂಲಕ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿ, ಹೆಚ್ಚಿನ ತಪಾಸಣೆ ಕೈಗೊಳ್ಳಲಾಗಿದೆ.
8 May 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment