ಬಂಟ್ವಾಳದಲ್ಲಿ 80.27 ಶೇಕಡಾ, ಬೆಳ್ತಂಗಡಿಯಲ್ಲಿ 80.33 ಶೇಕಡಾ ಮತ ಚಲಾವಣೆ
ಬಂಟ್ವಾಳ, ಮೇ 10, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ನಡೆದ ಮತದಾನದಲ್ಲಿ ಶೇಕಡಾ 80.27% ಮಂದಿ ತಮ್ಮ ಪರಮಾಧಿಕಾರ ಚಲಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾನ ಬೆಳ್ತಂಗಡಿ ಕ್ಷೇತ್ರದಲ್ಲಾಗಿದ್ದು, ಅಲ್ಲಿ 80.33 ಶೇಕಡಾ ಮತ ಚಲಾವಣೆಯಾಗಿದೆ. ಬಳಿಕದ ಸ್ಥಾನದಲ್ಲಿ ಬಂಟ್ವಾಳ ಇದೆ. ಬಂಟ್ವಾಳದಲ್ಲಿ ಒಟ್ಟು 2,28,377 ಮತದಾರರ ಪೈಕಿ 1,83,326 ಮಂದಿ ಮತದಾನ ಮಾಡಿದ್ದಾರೆ.
0 comments:
Post a Comment