ವ್ಯಕ್ತಿಯ ದೈಹಿಕ-ಮಾನಸಿಕ ವಿಕಸನಕ್ಕೆ ಕ್ರೀಡಾ ಚಟುವಟಿಕೆ ಸಹಕಾರಿ : ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಸುಬ್ರಾಯ ಕಾಮತ್ - Karavali Times ವ್ಯಕ್ತಿಯ ದೈಹಿಕ-ಮಾನಸಿಕ ವಿಕಸನಕ್ಕೆ ಕ್ರೀಡಾ ಚಟುವಟಿಕೆ ಸಹಕಾರಿ : ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಸುಬ್ರಾಯ ಕಾಮತ್ - Karavali Times

728x90

27 April 2023

ವ್ಯಕ್ತಿಯ ದೈಹಿಕ-ಮಾನಸಿಕ ವಿಕಸನಕ್ಕೆ ಕ್ರೀಡಾ ಚಟುವಟಿಕೆ ಸಹಕಾರಿ : ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಸುಬ್ರಾಯ ಕಾಮತ್

ಬಂಟ್ವಾಳ ಎಸ್.ವಿ.ಎಸ್. ಕಾಲೇಜು ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ


ಬಂಟ್ವಾಳ, ಎಪ್ರಿಲ್ 27, 2023 (ಕರಾವಳಿ ಟೈಮ್ಸ್) : ಉತ್ತಮ ಬದುಕು ರೂಪಿತವಾಗಬೇಕಾದರೆ ಆತನಲ್ಲಿ ದೈಹಿಕ ಮತ್ತು ಮಾನಸಿಕ ವಿಕಸನ ಅಗತ್ಯ. ಉತ್ತಮ ಆರೋಗ್ಯವು ಈ ವಿಕಾಸಕ್ಕೆ ಸಹಕಾರಿ. ಒಬ್ಬ ವ್ಯಕ್ತಿ ಉತ್ತಮ ಆರೋಗ್ಯ ಹೊಂದಬೇಕಾದರೆ ಆತನು ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳÀಬೇಕು ಎಂದು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಸುಬ್ರಾಯ ಕಾಮತ್ ಹೇಳಿದರು.

ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ 2022-23ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ  ಮಾತನಾಡಿದ ಅವರು, ವಿದ್ಯಾರ್ಥಿ ಜೀವನವು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದಕ್ಕೆ ಸಹಕಾರಿ. ಈ ಕ್ರೀಡೆಯಿಂದಾಗುವ ನಿರಂತರ ವ್ಯಾಯಾಮ ಆತನಿಗೆ ಆರೋಗ್ಯದೊಂದಿಗೆ ದೈಹಿಕ ಸಾಮಥ್ರ್ಯವನ್ನು ನೀಡುತ್ತದೆ. ಇದು ಆತನ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಸುಯೋಗವರ್ಧನ್ ಡಿ ಎಂ ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ಕ್ರೀಡೆಯಂತಹ ದೈಹಿಕ ಸಾಮಥ್ರ್ಯದ ಚಟುವಟಿಕೆಗಳು ಆತನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಕ್ರೀಡಾಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದವರಿಗೆ ಹಲವು ಉದ್ಯೋಗಾವಕಾಶಗಳು ಇಂದು ಲಭ್ಯವಾಗುತ್ತಿವೆ ಎಂದರು.

ಕಾಲೇಜು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶಿವಣ್ಣ ಪ್ರಭು ಕೆ ಸ್ವಾಗತಿಸಿ, ಐಕ್ಯೂಎಸಿ ಸಂಯೋಜಕ ಡಾ ಟಿ ಕೆ ರವೀಂದ್ರನ್ ಅತಿಥಿ ಪರಿಚಯ ಮಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ವಿಕಾಸ್ ವಂದಿಸಿದರು. ಕು ವಿನುತ ಪೈ ಪ್ರಾರ್ಥಿಸಿದರು. ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಶಿಕ್ಷಕ-ಶಿಕ್ಷಕೇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ವ್ಯಕ್ತಿಯ ದೈಹಿಕ-ಮಾನಸಿಕ ವಿಕಸನಕ್ಕೆ ಕ್ರೀಡಾ ಚಟುವಟಿಕೆ ಸಹಕಾರಿ : ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಸುಬ್ರಾಯ ಕಾಮತ್ Rating: 5 Reviewed By: karavali Times
Scroll to Top