ಬಂಟ್ವಾಳ ತಾಲೂಕು ಮಟ್ಟದ ಮಹಾವೀರ ಜಯಂತಿ ಆಚರಣೆ
ಬಂಟ್ವಾಳ, ಎಪ್ರಿಲ್ 04, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಆಚರಣೆಯು ಮಂಗಳವಾರ (ಎಪ್ರಿಲ್ 4) ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ ಮಾತನಾಡಿ, ಸರ್ವ-ಧರ್ಮ ಸಮಭಾವ ಇರುವ ನಮ್ಮ ದೇಶದಲ್ಲಿ ಅಹಿಂಸೆಯ ಮೂಲಕ ಸಮನ್ವತೆಯಿಂದ ಬಾಳಬಹುದಾಗಿದೆ ಎಂದರು.
ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ವೀರ್ ದೀಪಕ್ ಕುಮಾರ್ ಮಾತನಾಡಿ, ಬದುಕು, ಬದುಕಲು ಬಿಡು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತ. ಆಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಈ ಸಂದೇಶವು ಎಂದಿಗೂ ಸತ್ಯವಾಗಿರುತ್ತದೆ. ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿ ಎಂದು ಕರೆ ನೀಡಿದರು.
ಈ ಸಂದರ್ಭ ಭಾರತೀಯ ಜೈನ್ ಮಿಲನ್ ಮಂಗಳೂರು ವಲಯ ಕಾರ್ಯದರ್ಶಿ ವೀರ್ ಸುಭಾಷ್ ಚಂದ್ರ ಜೈನ್, ವೀರಾಂಗನೆ ವಿಜಯ ಕುಮಾರಿ ಇಂದ್ರ, ವೀರಾಂಗನೆ ಸನ್ಮತಿ ಇಂದ್ರ, ವೀರಾಂಗನೆ ಗೀತಾ ಜಿನಚಂದ್ರ,
ವೀರಾಂಗನೆ ಚಂದನಾ ಬ್ರಿಜೇಶ್ ಬಾಳ್ತಿಲ, ವೀರ್ ಹೇಮಂತ್ ಜೈನ್, ವೀರ್ ಜಿನೇಂದ್ರ ಜೈನ್, ವೀರ್ ಅಜಿತ್ ಕುಮಾರ್, ವೀರ್ ರಾಜೇಂದ್ರ ಜೈನ್, ವಿ, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment