ಮಂಗಳೂರು, ಎಪ್ರಿಲ್ 16, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಭಾನುವಾರ (ಎಪ್ರಿಲ್ 16) ಸಂತ್ರಸ್ತರ ದಿನ (ವಿಕ್ಟಿಮ್ಸ್ ಡೇ) ಪ್ರಯುಕ್ತ ಸಂತ್ರಸ್ತರ ಸಭೆ ನಡೆಸಲಾಯಿತು.
ಎಲ್ಲ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಕರೆದು, ಅವರ ಪ್ರಕರಣದ ಪ್ರಸ್ತುತ ಹಂತದ ಮಾಹಿತಿ ನೀಡುವ ಸಲುವಾಗಿ, ಪ್ರಕರಣಗಳ ತನಿಖೆಗೆ/ ವಿಚಾರಣೆಗೆ ಪೂರಕವಾದ ಮಾಹಿತಿಗಳನ್ನು ಪಡೆಯಲು, ಪ್ರಕರಣದ ಆರೋಪಿಗಳಿಂದ ಯಾವುದೇ ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡುತ್ತಿದ್ದಲ್ಲಿ ಮಾಹಿತಿ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಂಡು ಸಂತ್ರಸ್ತರಲ್ಲಿ ಭದ್ರತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ, ಹಾಗೂ ಸಂತ್ರಸ್ತರಿಗೆ ಕಾನೂನಿನ ಪ್ರಕಾರ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಸಭೆಗಳನ್ನು ನಡೆಸಲಾಯಿತು.
0 comments:
Post a Comment