ಬೆಳ್ತಂಗಡಿ, ಎಪ್ರಿಲ್ 23, 2023 (ಕರಾವಳಿ ಟೈಮ್ಸ್) : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ವೇಣೂರು ಕೆಳಗಿನಪೇಟೆ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಕಾರು ನಿಲ್ಲಿಸಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರುತ್ತಿದ್ದ ನಾಲ್ವರು ಆರೋಪಿಗಳನ್ನು ವೇಣೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ, ಕೆ ಆರ್ ಪುರಂ ಅಂಚೆ ವ್ಯಾಪ್ತಿಯ, ವಾರಣಾಸಿ ಗ್ರಾಮದ ವಿಶ್ವಾಸ್ ನಿಲಯ ನಿವಾಸಿ ರಾಜೇಶ್ ಎಂಬವರ ಪುತ್ರ ಗೌರಿಶಂಕರ್ ಆರ್ (19), ಬೆಂಗಳೂರು ಗ್ರಾಮಾಂತರ, ಕೆ ಆರ್ ಪುರಂ ಅಂಚೆ ವ್ಯಾಪ್ತಿಯ, ವಾರಣಾಸಿ ಗ್ರಾಮದ ಮದರ್ ತೆರೇಸಾ ಶಾಲಾ ಬಳಿ ನಿವಾಸಿ ಪಿಳ್ಳಮುನಿಯಪ್ಪ ಎಂಬವರ ಪುತ್ರ ಮನು ಪಿ (19), ಬೆಂಗಳೂರು ಗ್ರಾಮಾಂತರ, ಹೊಸಕೋಟ್ ತಾಲೂಕು, ಕುಂಬಳಹಳ್ಳಿ ಅಂಚೆ ವ್ಯಾಪ್ತಿಯ, ಚಿಂತಾಮಣಿ ರಸ್ತೆ ಮಂಜುಶ್ರೀ ಲೇಔಟ್ ನಿವಾಸಿ ಲೋಕೇಶ್ ಎಂಬವರ ಪುತ್ರ ಅಭಿ ಕೆ ಎಲ್ (19) ಹಾಗೂ ಬೆಂಗಳೂರು ಗ್ರಾಮಾಂತರ, ಹೊಸಕೋಟೆ ತಾಲೂಕು, ಕೆಕೆ ಲೇಔಟ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಕನ್ನೂರು ಹಳ್ಳಿ ರಸ್ತೆ ಪುಷ್ಪಲತಾ ಬಿಲ್ಡಿಂಗ್ ನಿವಾಸಿ ಶ್ರೀನಿವಾಸ ಎಂಬವರ ಪುತ್ರ ಮೋಹನ್ ರಾಜ್ ಎಸ್ (18) ಎಂದು ಹೆಸರಿಸಲಾಗಿದೆ.
ವೇಣೂರು ಠಾಣಾ ಪಿಎಸ್ಸೈ ಶ್ರೀಶೈಲ ದುಂಡಪ್ಪ ಮುರಗೋಡು ಅವರು ತನ್ನ ಸಿಬ್ಬಂದಿಯವರೊಂದಿಗೆ ಶನಿವಾರ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ, ಭಾನುವಾರ ಮುಂಜಾನೆ 5 ಗಂಟೆಗೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ವೇಣೂರು ಕೆಳಗಿನಪೇಟೆ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಆರೋಪಿತರುಗಳು ಟಾಟಾ ಕ್ವಾಲಿಸ್ ಕಾರು ನಿಲ್ಲಿಸಿ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ಪತ್ತೆಹಚ್ಚಿ ಕೂಲಂಕುಷವಾಗಿ ವಿಚಾರಿಸಲಾಗಿ ಆರೋಪಿತರುಗಳು ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡಿರುವ ವೇಣೂರು ಪೊಲೀಸರು ಠಾಣಾ ಅಪರಾಧ ಕ್ರಮಾಂಕ 22/2023 ಕಲಂ 27(ಬಿ) ಎನ್ ಡಿ ಪಿ ಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment