ವೇಣೂರು, ಎಪ್ರಿಲ್ 30, 2023 (ಕರಾವಳಿ ಟೈಮ್ಸ್) : ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಬಿ ಅವರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಗಾಂಜಾ ಪ್ರಕರಣ ಬೇಧಿಸಿ ಆರೋಪಿ ಕಡಬ ತಾಲೂಕು, ಸವಣೂರು ಗ್ರಾಮದ ಇದ್ಯಾಡಿ ನಿವಾಸಿ ಪೂವಣಿ ಗೌಡ ಎಂಬವರ ಪುತ್ರ ಪ್ರಸಾದ್ ಅಲಿಯಾಸ್ ಪಚ್ಚು (31) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯಿಂದ 17 ಸಾವಿರ ರೂಪಾಯಿ ಮೌಲ್ಯದ 545 ಗ್ರಾಂ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ 20 ಸಾವಿರ ರೂಪಾಯಿ ಮೌಲ್ಯದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2023 ಕಲಂ 8(ಸಿ), 20(ಬಿ) ಎನ್ ಡಿ ಪಿ ಎಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment