ಬಂಟ್ವಾಳ, ಎಪ್ರಿಲ್ 30, 2023 (ಕರಾವಳಿ ಟೈಮ್ಸ್) : ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ಅವರ ಪರವಾಗಿ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಮನೆ ಮನೆಗೆ ತೆರಳಿದ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬಿರುಸಿನ ಮತ ಯಾಚನೆ ನಡೆಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಕ್ ಕುಕ್ಕಾಜೆ, ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಸಂಪಿಲ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಕುರಿಯಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್, ಶ್ರೀಮತಿ ನಳಿನಾಕ್ಷಿ, ಬೂತ್ ಸಮಿತಿ ಅಧ್ಯಕ್ಷ ಫೈಝಲ್ ಎಸ್ ಪಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಪಾರ್ವತಿ ಸಹಿತ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಯು ಟಿ ಖಾದರ್ ಪರವಾಗಿ ಮತಯಾಚನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಇರಾ ಗ್ರಾ ಪಂ ಮಾಜಿ ಅಧ್ಯಕ್ಷ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ರಝಾಕ್ ಕುಕ್ಕಾಜೆ ವಿಟ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿದ್ದ ಇರಾ ಗ್ರಾಮ ಆ ಬಳಿಕ ಕೇತ್ರ ವಿಂಗಡನೆಯಾಗಿ ಯು ಟಿ ಖಾದರ್ ಅವರ ನಾಯಕತ್ವದ ಮಂಗಳೂರು ಕ್ಷೇತ್ರಕ್ಕೆ ಸೇರಿದ ನಂತರ ಅಭೂತಪೂರ್ವ ಅಭಿವೃದ್ದಿ ಸಾಧಿಸಿದೆ. ಯು ಟಿ ಖಾದರ್ ಅವರು ಈ ಗ್ರಾಮದ ಜನರೊಂದಿಗೆ ಸದಾ ನಿಕಟ ಸಂಪರ್ಕ ಇಟ್ಟುಕೊಂಡು ಗ್ರಾಮಕ್ಕೆ ವಿಶೇಷ ಅನುದಾನ ಒದಗಿಸುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸಿದ್ದಾರೆ. ಗ್ರಾಮದ ಎಲ್ಲಾ ಜಾತಿ ಸಮುದಾಯದ ಜನರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿರುವ ಶಾಸಕ ಖಾದರ್ ಅವರು ಗ್ರಾಮಕ್ಕೆ ಸಮುದಾಯ ಭವನ, ಕಾಲೊನಿಗಳ ಅಭಿವೃದ್ದಿ ಸಹಿತ ಹಲವು ಅಭಿವೃದ್ದಿ ಕಾಮಗಾರಿಗಳನ್ನು ನಡೆಸಿದ್ದು, ಇದುವೇ ಈ ಭಾಗದಲ್ಲಿ ಜನ ಯು ಟಿ ಖಾದರ್ ಅವರನ್ನು ನೆಚ್ಚಿಕೊಳ್ಳಲು ಪ್ರಮುಖ ಕಾರಣವಾಗಿದೆ. ಈ ಬಾರಿಯೂ ಗ್ರಾಮದ ಜನ ಯು ಟಿ ಖಾದರ್ ಪರವಾಗಿ ಹೃದಯಸ್ಪರ್ಶಿ ಒಲವನ್ನು ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
0 comments:
Post a Comment