ಬಂಟ್ವಾಳ, ಎಪ್ರಿಲ್ 19, 2023 (ಕರಾವಳಿ ಟೈಮ್ಸ್) : ಸೋಮವಾರ (ಎಪ್ರಿಲ್ 17) ಸಂಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಸಂಗಬೆಟ್ಟು ಗ್ರಾ ಪಂ ಬಿಜೆಪಿ ಬೆಂಬಲಿತ ಸದಸ್ಯೆ ಶಾಂತ ಹಾಗೂ ಅವರ ಪತಿ ಉದಯ ಅವರು ಮರಳಿ ಬಿಜೆಪಿ ಪಕ್ಷಕ್ಕೆ ವಾಪಸ್ಸಾಗಿದ್ದು, ಅವರ ಜೊತೆಯಲ್ಲಿ ಇನ್ನಿಬ್ಬರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ
ಶಾರದ ಹಾಗೂ ಜಯ ಅವರು ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಶಾರದ ಅವರು ಕಳೆದ ಬಾರಿ ಸಂಗಬೆಟ್ಟು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತೆಯಾಗಿ ಸ್ಪರ್ಧಿಸಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಅವರ ಸಮ್ಮುಖದಲ್ಲಿ ಬಿಜೆಪಿ ಧ್ವಜ ಹಾಗೂ ಶಾಲು ಹಾಕಿ ಅವರನ್ನು ಪಕ್ಷಕ್ಕೆ ಬರಮಾಡಲಾಯಿತು.
ಈ ಸಂದರ್ಭ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿಗಳಾದ ಗಣೇಶ್ ರೈ, ಪುರುಷೋತ್ತಮ ಶೆಟ್ಟಿ ವಾಮದಪದವು, ಸೀತಾರಾಮ ಪೂಜಾರಿ, ಪ್ರಮುಖರಾದ ರತ್ನಕುಮಾರ್ ಚೌಟ, ಸತೀಶ್ ಪೂಜಾರಿ, ಮಂದಾರತಿ ಶೆಟ್ಟಿ, ನವೀನ್ ಹೆಗ್ಡೆ, ಉಮೇಶ್ ಗೌಡ, ಗಣೇಶ್ ಕೋಟ್ಯಾನ್, ಭರತ್, ಸತೀಶ್ ಸಂದೇಶ್ ಶೆಟ್ಟಿ ಮೊಡಂಕಾಪು, ಸಂತೋಷ್ ರಾಯಿಬೆಟ್ಟು, ದಿನೇಶ್ ರಾಯಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment