ಬಂಟ್ವಾಳ, ಎಪ್ರಿಲ್ 19, 2023 (ಕರಾವಳಿ ಟೈಮ್ಸ್) : ಸಂಸ್ಕಾರದ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದದ್ದು. ಉತ್ತಮ ಸಾಹಿತ್ಯದಿಂದ ಸಂಸ್ಕಾರ ಸಾಧ್ಯ. ಹಾಗಾಗಿ ಮಕ್ಕಳ ಸಾಹಿತ್ಯದ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಬಹುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಬಂಟ್ಟಾಳ ತಾಲೂಕು ಘಟಕಾಧ್ಯಕ್ಷೆ ಶ್ರೀಕಲಾ ಕಾರಂತ ಅಳಿಕೆ ಹೇಳಿದರು.
ನವಚೇತನ ಯುವಕ ಮಂಡಲ ಸಾಲೆತ್ತೂರುನಲ್ಲಿ ಸಂಸ್ಕಾರ ಭಾರತೀ ಬಂಟ್ಟಾಳ ತಾಲೂಕು ಘಟಕದ ವತಿಯಿಂದ ಆಯೋಜಿಸಲಾದ ಸಂಸ್ಕಾರ ಸೌರಭ ಮಕ್ಕಳ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸವಿತಾ ಶೆಟ್ಟಿ ಪುಂಚಿಲ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ಟಾಳ ತಾಲೂಕು ಉಪಾಧ್ಯಕ್ಷರಾದ ಡಾ ವಾರಿಜ ನಿರ್ಬೈಲ್ ಶುಭ ಹಾರೈಸಿದರು. ಇದೇ ವೇಳೆ ಮಕ್ಕಳಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಂಸ್ಕಾರ ಸಾಹಿತ್ಯದ ಅಗತ್ಯತೆಯನ್ನು ಸಾಹಿತಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಗೋಪಾಲಕೃಷ್ಣ ನೇರಳಕಟ್ಟೆ ವಿವರಿಸಿದರು. ಕಥನ ಕಾವ್ಯ ರಚನೆಯ ಬಗ್ಗೆ ಸಾಹಿತಿ ಹಾಗೂ ಸಂಪನ್ಮೂಲ ವ್ಯಕ್ತಿ ಜಯರಾಮ ಪಡ್ರೆಯವರು ಮಾಹಿತಿ ನೀಡಿದರು. ಜಿಲ್ಲಾ ಸಾಹಿತ್ಯ ವಿಭಾ ಪ್ರಮುಖ್ ಹಾಗೂ ಸಾಹಿತಿ ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳ ವಿವಿಧ ಚಟುವಟಿಕೆಗಳನ್ನು ತುಳಸಿ ಮಂಚಿ, ರೇಖಾ ಮಂಚಿ, ಲಕ್ಷ್ಮೀ ಆಚಾರ್ಯ ಕುಕ್ಕಾಜೆ ಅವರು ನಿರ್ವಹಿಸಿದರು.
0 comments:
Post a Comment