ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಪಕ್ಷ ಈ ದೇಶದ, ಈ ರಾಜ್ಯದ ಜನತೆಗೆ ನೀಡಿದ ಎಲ್ಲಾ ಯೋಜನೆಗಳು ಈಗಲೂ ಊರ್ಜಿತದಲ್ಲಿದ್ದು, ಬಿಜೆಪಿ ನೀಡಿದ ಯೋಜನೆಗಳು ಹೇಳ ಹೆಸರಿಲ್ಲದೆ ಹಳ್ಳ ಹಿಡಿದಿದೆ ಎಂದು ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದರು.
ಬಿ ಸಿ ರೋಡಿನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ನೀಡಿದ ಮಕ್ಕಳ ಸೈಕಲ್, ಶೂ ಭಾಗ್ಯ ಈಗೆಲ್ಲಿದೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಈಗಾಗಲೇ ಬಡವರಿಗಾಗಿ ನೀಡಲಾದ ಗ್ಯಾರಂಟಿ ಕಾರ್ಡಿನಲ್ಲಿ ಉಲ್ಲೇಖಿಸಲಾದ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಕಾರ್ಯಗತಗೊಳಿಸುವ ಬಗ್ಗೆ ಜನರಿಗೆ ಯಾವುದೇ ರೀತಿಯ ಸಂಶಯ ಬೇಡ, ಯಾಕಂದ್ರೆ ಇದು “ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್” ಎಂದು ಭರವಸೆ ನೀಡಿದರು.
ಬಂಟ್ವಾಳ ಪುರಸಭೆಯಲ್ಲಿ ಬಹುಮತದ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಹೊರತು ಎಸ್ಡಿಪಿಐ ಜೊತೆಗೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಂಡಿಲ್ಲ ಮತ್ತು ಯಾವುದೇ ಸ್ಥಾನಮಾನವನ್ನು ಅವರಿಗೆ ಬಿಟ್ಟು ಕೊಟ್ಟಿಲ್ಲ, ಕಳೆದ 5 ವರ್ಷಗಳಿಂದ ಬಂಟ್ವಾಳದಲ್ಲಿ ಶಾಂತಿ ನೆಮ್ಮದಿ ಇದೆ ಎಂದು ಹೇಳುವವರು ಈ ಹಿಂದೆ ಶಾಂತಿಗೆ ಭಂಗ ತಂದವರು ಯಾರು ಮತ್ತು ಈಗ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಾದ ಗಲಭೆಗೂ ಕಾರಣಕರ್ತರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.
0 comments:
Post a Comment