ಬಂಟ್ವಾಳ, ಎಪ್ರಿಲ್ 10, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಪೊನ್ನೋಡಿ ಎಂಬಲ್ಲಿ ಸೋಮವಾರ (ಎ 10) ಮುಂಜಾನೆ ಬೈಕ್ ಪ್ರಪಾತಕ್ಕೆ ಉರುಳಿ ಬಿದ್ದು ಸಹಸವಾರ ಮೃತಪಟ್ಟು ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಸಹಸವಾರನನ್ನು ಚಿಕ್ಕಮಗಳೂರು ನಿವಾಸಿ ಯಶೋಧರ (25) ಹಾಗೂ ಗಾಯಗೊಂಡ ಸವಾರನನ್ನು ಅವಿನಾಶ್ ಎಂದು ಹೆಸರಿಸಲಾಗಿದೆ. ಇವರಿಬ್ಬರೂ ಸ್ನೇಹಿತರಾಗಿದ್ದು ಮಂಗಳೂರು ಸಿಟಿ ಸೆಂಟರಿನಲ್ಲಿ ಉದ್ಯೋಗಿಗಳಾಗಿದ್ದಾರೆ. ಬೆಳ್ತಂಗಡಿಯಲ್ಲಿ ಸ್ನೇಹಿತನ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಸೋಮವಾರ ಬೆಳಗ್ಗಿನ ಜಾವ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೈಕ್ ಸವಾರನ ನಿಯಂತ್ರಣ ಮೀರಿ ಬಿ ಸಿ ರೋಡು ಸಮೀಪದ ಪೊನ್ನೋಡಿ ಎಂಬಲ್ಲಿ ರಸ್ತೆ ಬದಿಯ ಸುಮಾರು 10 ಅಡಿಗೂ ಮೀರಿದ ಪ್ರತಾಪಕ್ಕೆ ಉರುಳಿ ಬಿದ್ದ ಪರಿರಣಾಮ ಸಹಸವಾರ ಯಶೋಧರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸವಾರ ಅವಿನಾಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಕ್ಕೆ ಬೈಕ್ ಸವಾರ ಅವಿನಾಶ್ ಅವರ ಅಜಾಗರೂಕತೆ ಹಾಗೂ ದುಡುಕುತನದ ಚಾಲನೆಯೇ ಕಾರಣ ಎಂದು ದೂರಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೆÇಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತ ಯಶೋಧರ ಅವರ ಸ್ನೇಹಿತ ಬೆಳ್ತಂಗಡಿ ನಿವಾಸಿ ಲಕ್ಷ್ಮಣ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment