ಬಂಟ್ವಾಳ, ಎಪ್ರಿಲ್ 21, 2023 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ಗೂಡಿನಬಳಿ ಬಿ ಮೂಡ ಸರಕಾರಿ ಪಿಯು ಕಾಲೇಜಿನ 16 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ತೇರ್ಗಡೆಗೊಳ್ಳುವ ಮೂಲಕ ಕಾಲೇಜಿಗೆ 96 ಶೇಕಡಾ ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನುಸೈಬಾ 581 ಅಂಕಗಳನ್ನು ಗಳಿಸಿ 96.83 ಶೇಕಡಾ ಫಲಿತಾಂಶ ದಾಖಲಿಸಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಈಕೆ ಅರ್ಥ ಶಾಸ್ತ್ರ ಹಾಗೂ ಇತಿಹಾಸ ವಿಷಯದಲ್ಲಿ ಪೂರ್ಣ 100 ಅಂಕಗಳನ್ನು ಗಳಿಸಿದ್ದಾಳೆ. ಈಕೆ ನಂದಾವರ ನಿವಾಸಿ ಅಬ್ದುಲ್ ಬಶೀರ್-ಜುಬೈದಾ ದಂಪತಿಯ ಪುತ್ರಿಯಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೂಡಾ ಈಕೆ ನಂದಾವರ ಸರಕಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪೂರೈಸಿದ್ದಾಳೆ.
ಉಳಿದಂತೆ ಕಾಲೇಜಿನಲ್ಲಿ ಒಟ್ಟು 191 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 184 ಮಂದಿ ತೇರ್ಗಡೆ ಹೊಂದುವ ಮೂಲಕ 96 ಫಲಿತಾಂಶ ದಾಖಲಾಗಿದೆ. ಈ ಪೈಕಿ ಕಲಾ ವಿಭಾಗದಲ್ಲಿ 77 ಮಂದಿ ವಿದ್ಯಾರ್ಥಿಳ ಪೈಕಿ 73 ಮಂದಿ ತೇರ್ಗಡೆಗೊಂಡಿದ್ದು 94.80 ಫಲಿತಾಂಶ ದಾಖಲಾದರೆ, ವಾಣಿಜ್ಯ ವಿಭಾಗದ 84 ಮಂದಿ ವಿದ್ಯಾರ್ಥಿಗಳ ಪೈಕಿ 82 ಮಂದಿ ತೇರ್ಗಡೆ ಹೊಂದಿ 97 ಶೇಕಡಾ ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 30 ವಿದ್ಯಾರ್ಥಿಗಳ ಪೈಕಿ 29 ಮಂದಿ ತೇರ್ಗಡೆ ಹೊಂದಿದ್ದು, 96 ಶೇಕಡಾ ಫಲಿತಾಂಶ ದಾಖಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ ತಿಳಿಸಿದ್ದಾರೆ.
0 comments:
Post a Comment