ವಾಷಿಂಗ್ಟನ್, ಎಪ್ರಿಲ್ 30, 2023 (ಕರಾವಳಿ ಟೈಮ್ಸ್) : 200 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ ಇದೀಗ ಹೊಸ ಫೀಚರ್ ಅನ್ನು ಹೊರತಂದಿದೆ. ಒಂದೇ ವಾಟ್ಸಪ್ ಖಾತೆಯನ್ನು ಇದೀಗ ಹೊಸ ತಂತ್ರಜ್ಞಾನದಂತೆ ಒಂದಕ್ಕಿಂತಲೂ ಅಧಿಕ ಫೋನ್ ಗಳಲ್ಲಿ ಲಾಗ್ ಇನ್ ಮಾಡಲು ಅನುಮತಿ ನೀಡಿದೆ.
ಈ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್‍ಬರ್ಗ್ ಫೇಸ್‍ಬುಕ್ ಹಾಗೂ ಇನ್ ಸ್ಟಾಗ್ರಾಮ್ ಗಳಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ನೀವು 4 ಫೋನ್ ಗಳಲ್ಲಿ ವಾಟ್ಸಪ್‍ನ ಒಂದೇ ಖಾತೆಯನ್ನು ಲಾಗ್ ಇನ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ವಾಟ್ಸಪ್ ನ ಒಂದು ಖಾತೆಯನ್ನು ನಾವು ಒಂದು ಫೋನ್ ಹಾಗೂ ಒಂದು ಡೆಸ್ಕ್ ಟಾಪ್ ಸಾಧನಗಳಲ್ಲಷ್ಟೇ ಬಳಸಲು ಸಾಧ್ಯವಾಗುತ್ತಿತ್ತು. ಈ ಮಿತಿ ಇದೀಗ ವಿಸ್ತರಣೆಯಾಗಿದ್ದು, ಒಂದೇ ಖಾತೆಯನ್ನು 4 ಫೋನ್ ಗಳಲ್ಲಿ ಬಳಸಲು ಸಾಧ್ಯವಾಗುತ್ತಿದೆ. ಈ ಫೀಚರ್ ಮುಂದಿನ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ವಾಟ್ಸಪ್ ತಿಳಿಸಿದೆ.
ವಾಟ್ಸಪ್ ನ ಈ ಹೊಸ ಫೀಚರ್ ಇದೀಗ ಬಳಕೆದಾರರು ತಮ್ಮ ಖಾತೆಗಳನ್ನು ಇತರ ಫೋನ್ ಹಾಗೂ ಸಾಧನಗಳಲ್ಲಿ ಸಿಂಕ್ ಮಾಡಲು ಸಾಧ್ಯವಾಗಲಿದೆ. ಇದು ನಿಮ್ಮ ಫೋನ್ ಸ್ವಿಚ್ ಆಫ್ ಅಥವಾ ಹಾಳಾಗಿದ್ದಾಗ ಇತರರ ಫೋನ್ ನಲ್ಲಿ ನಿಮ್ಮ ಖಾತೆಯನ್ನು ಪರಿಶೀಲಿಸಲು ಅಥವಾ ಬಳಸಲು ಸಹಕಾರಿಯಾಗಲಿದೆ. ಎಂಡ್ ಟು ಎಂಡ್ ಎನ್‍ಕ್ರಿಪ್ಶನ್ ನ ರಕ್ಷಣೆಯನ್ನು ಉಳಿಸಿಕೊಂಡು ಬೇರೆ ಬೇರೆ ಸಾಧನಗಳಲ್ಲಿ ಸಂದೇಶಗಳನ್ನು ಸಿಂಕ್ ಮಾಡಲು ವಾಟ್ಸಪ್ ನ ಹೊಸ ತಂತ್ರಜ್ಞಾನದ ಅಭಿವೃದ್ಧಿಯಿಂದ ಇದು ಸಾಧ್ಯವಾಗಿದೆ.
0 comments:
Post a Comment