ಬಂಟ್ವಾಳ, ಎಪ್ರಿಲ್ 13, 2023 (ಕರಾವಳಿ ಟೈಮ್ಸ್) : ದಾಖಲೆ ರಹಿತ ಅಕ್ರಮ ಅಕ್ಕಿ ಸಾಗಾಟ ಪ್ರಕರಣ ಪತ್ತೆ ಹಚ್ಚಿದ ವಿಟ್ಲ ಪೊಲೀಸರು ವಾಹನ ಸಹಿತ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ 200 ಚೀಲ ಅಕ್ಕಿ ವಶಪಡಿಸಿಕೊಂಡ ಘಟನೆ ಉಕ್ಕುಡ ಚೆಕ್ ಪೋಸ್ಟ್ ಬಳಿ ಮಂಗಳವಾರ (ಎಪ್ರಿಲ್ 11) ನಡೆದಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಉಕ್ಕುಡ ಪೆÇಲೀಸ್ ಚೆಕ್ ಪೆÇೀಸ್ಟ್ ನಲ್ಲಿ ವಿಟ್ಲ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳೊಂದಿಗೆ ಕುದ್ದುಪದವು, ಮರಕ್ಕಿಣಿಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಜೀತೊ ವಾಹನ ನಿಲ್ಲಿಸಿ ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಾಹನ ಚಾಲಕ ಮಹಮ್ಮದ್ ಅಲಿ ಎಂಬಾತನನ್ನು ಪೊಲೀಸರು ವಿಚಾರಿಸಿದಾಗ ಆತನ ಬಳಿ ಅಕ್ಕಿ ಸಾಗಾಟದ ಬಗ್ಗೆ ಯಾವುದೇ ಬಿಲ್ ಅಥವಾ ದಾಖಲಾತಿ ಇರಲಿಲ್ಲ. ಈ ಸಂದರ್ಭ ಪೊಲೀಸರು ವಾಹನ ಪರಿಶೀಲನೆ ನಡೆಸಿದಾಗ ತಲಾ 50 ಕೆ ಜಿ ಅಕ್ಕಿ ಒಳಗೊಂಡ 20 ಚೀಲಗಳು ದೊರೆತಿದೆ. ಇದನ್ನು ಕೇಪು ಗ್ರಾಮದ ಮರಕ್ಕಿಣಿಯ ಹನೀಫ್ ಎಂಬಾತನ ಗೋಡೌನ್ ಗೆ ಸಾಗಿಸುತ್ತಿರುವುದಾಗಿ ಚಾಲಕ ಅಲಿ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸರು ಮರಕ್ಕಿಣಿಗೆ ತೆರಳಿ ಗೋಡೌನ್ ಪರಿಶೀಲಿಸಿದಾಗ ಅಲ್ಲಿಯೂ ದಾಖಲೆ ರಹಿತವಾದ ತಲಾ 50 ಕೆಜಿ ತೂಕದ 180 ಚೀಲಗಳಲ್ಲಿ ಒಟ್ಟು 9 ಟನ್ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ.
ಜೀತೊ ವಾಹನದಲ್ಲಿದ್ದ ತಲಾ 50 ಕೆಜಿಯ 20 ಚೀಲಗಳಲ್ಲಿದ್ದ ಅಕ್ಕಿಯ ಒಟ್ಟು ತೂಕ 1 ಟನ್ ಆಗಿದ್ದು, ಪೊಲೀಸರು ವಶಪಡಿಸಿಕೊಂಡ ಅಕ್ಕಿಯ ಪ್ರಮಾಣ ಒಟ್ಟು 200 ಅಕ್ಕಿ ಚೀಲಗಳಾಗಿವೆ. ಸ್ವಾಧೀನಪಡಿಸಿಕೊಂಡ ಅಕ್ಕಿಯ ಒಟ್ಟು ಮೌಲ್ಯ ಸುಮಾರು 3.30 ಲಕ್ಷ ರೂಪಾಯಿ ಹಾಗೂ ಜೀತೊ ವಾಹನದ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಸೇರಿ ಒಟ್ಟು 6.30 ಲಕ್ಷ ರೂಪಾಯಿ ಆಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment