ಬಂಟ್ವಾಳ, ಎಪ್ರಿಲ್ 08, 2023 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ರಮಳಾನ್ 17ರ ಬದ್ರ್ ಶುಹದಾಗಳ ಹೆಸರಿನಲ್ಲಿ ಸಾರ್ವಜನಿಕ ಇಫ್ತಾರ್ ಕಿಟ್ ವಿತರಣಾ ಕಾರ್ಯಕ್ರಮ ಬಿ ಸಿ ರೋಡಿನ ಮುಖ್ಯ ವೃತ್ತದ ಬಳಿ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಇಫ್ತಾರ್ ಟೆಂಟ್ ನಲ್ಲಿ ಶನಿವಾರ (ಎಪ್ರಿಲ್ 8) ನಡೆಯಿತು.
ಈ ಸಂಧರ್ಭ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಆಲಡ್ಕ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ, ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಪದಾಧಿಕಾರಿಗಳಾದ ಬಶೀರ್ ಬೇಕರಿ, ಮಜೀದ್ ಬೋಳಂಗಡಿ, ಇಸಾಕ್ ಫೇಷನ್ ವೇರ್, ಮುಹಮ್ಮದ್ ಶಫೀಕ್ ಆಲಡ್ಕ, ಶಾಫಿ ಹಾಜಿ, ರಫೀಕ್ ಇನೋಳಿ, ಪಾಣೆಮಂಗಳೂರು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಸವಾದ್ ಗೂಡಿನಬಳಿ, ಹನೀಫ್ ಮುಸ್ಲಿಯಾರ್ ತಾಳಿಪಡ್ಪು, ಬಂಟ್ವಾಳ ವಲಯ ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಸುಮಾರು 300 ಮಂದಿ ಹೆದ್ದಾರಿ ಪ್ರಯಾಣಿಕರಿಗೆ ಅನ್ನದಾನ, ಹಣ್ಣು-ಹಂಪಲು, ಹಣ್ಣಿನ ರಸ ಸಹಿತ ಇರುವ ಇಫ್ತಾರ್ ಕಿಟ್ ವಿತರಿಸಲಾಯಿತು.
0 comments:
Post a Comment