ರಮಾನಾಥ ರೈ ಅವರ ಕಾರ್ಯದಕ್ಷತೆ ಮೆಚ್ಚಿ “ಕೈ” ಪಕ್ಷ ಸೇರಿಕೊಂಡು ಗುತ್ತಿನ ಬಂಟರು - Karavali Times ರಮಾನಾಥ ರೈ ಅವರ ಕಾರ್ಯದಕ್ಷತೆ ಮೆಚ್ಚಿ “ಕೈ” ಪಕ್ಷ ಸೇರಿಕೊಂಡು ಗುತ್ತಿನ ಬಂಟರು - Karavali Times

728x90

26 April 2023

ರಮಾನಾಥ ರೈ ಅವರ ಕಾರ್ಯದಕ್ಷತೆ ಮೆಚ್ಚಿ “ಕೈ” ಪಕ್ಷ ಸೇರಿಕೊಂಡು ಗುತ್ತಿನ ಬಂಟರು

ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಅವರ ದಕ್ಷತೆಯ ನಾಯಕತ್ವವನ್ನು ಮೆಚ್ಚಿ ಸಮಾಜ ಸೇವಕರು, ಸಾಮಾಜಿಕ ಚಿಂತಕರುಗಳಾದ ಗುಬ್ಯಮೇಗಿನ ಗುತ್ತಿನ ಶ್ರೀಧರ ಕೆ ಶೆಟ್ಟಿ ಹಾಗೂ ಪಟ್ಲಗುತ್ತಿನ ದಾಮೋದರ ಶೆಟ್ಟಿ ಅವರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಮಾಜಿ ಸಚಿವ ಬಿ ರಮಾನಾಥ ರೈ ಅವರ ಸಮ್ಮುಖದಲ್ಲಿ ಬಿ ಸಿ ರೋಡಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಶ್ರೀಧರ ಶೆಟ್ಟಿ ಮತ್ತು ದಾಮೋದರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೊಂಡರು. 

ಈ ಸಂದರ್ಭ ಮಾತನಾಡಿದ ಶ್ರೀಧರ ಶೆಟ್ಟಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಮಾನಾಥ ರೈಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂಬ ಉದ್ದೇಶವಿದೆ. ಕ್ಷೇತ್ರದ ಜನತೆಯ ಮನವೊಲಿಸಿ ರೈಯವರ ವಿಜಯ ಪತಾಕೆ ಮತ್ತೊಮ್ಮೆ ಹಾರುವಂತೆ ಮಾಡಬೇಕು ಎಂದರು. 

ದಾಮೋದರ ಶೆಟ್ಟಿ ಮಾತನಾಡಿ, ರೈಗಳು ಅಧಿಕಾರದಲ್ಲಿದ್ದಾಗ ಸಾಕಷ್ಟು ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಜನತೆ ಮತದಾನ ಮಾಡಬೇಕು. ಅವರಂತಹ ದೂರದೃಷ್ಟಿಯುಳ್ಳ ನಾಯಕರು ನಮಗೆ ನಾಯಕರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು. 

ಈ ಸಂದರ್ಭ ಪಕ್ಷ ಪ್ರಮುಖರಾದ ಹಾಜಿ ಎ ಉಸ್ಮಾನ್ ಕರೋಪಾಡಿ, ಸುಧಾಕರ ಶೆಟ್ಟಿ ಖಂಡಿಗ, ಅಲ್ತಾಫ್ ಸಂಗಬೆಟ್ಟು, ನಾರಾಯಣ ನಾಯ್ಕ್, ಪರಮೇಶ್ವರ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ರಮಾನಾಥ ರೈ ಅವರ ಕಾರ್ಯದಕ್ಷತೆ ಮೆಚ್ಚಿ “ಕೈ” ಪಕ್ಷ ಸೇರಿಕೊಂಡು ಗುತ್ತಿನ ಬಂಟರು Rating: 5 Reviewed By: karavali Times
Scroll to Top