ಎಪ್ರಿಲ್ 15 ರಿಂದ 29ರವರೆಗೆ ನೇರಳಕಟ್ಟೆಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ - Karavali Times ಎಪ್ರಿಲ್ 15 ರಿಂದ 29ರವರೆಗೆ ನೇರಳಕಟ್ಟೆಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ - Karavali Times

728x90

11 April 2023

ಎಪ್ರಿಲ್ 15 ರಿಂದ 29ರವರೆಗೆ ನೇರಳಕಟ್ಟೆಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

ಬಂಟ್ವಾಳ, ಎಪ್ರಿಲ್ 12, 2023 (ಕರಾವಳಿ ಟೈಮ್ಸ್) : ನೇರಳಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಾಂಸ್ಕøತಿಕ ಸಂಘ, ಯಂಗ್ ಸ್ಟಾರ್ ಚಾಲಂಜರ್ಸ್ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘ, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ, ನೇತಾಜಿ ಗೆಳೆಯರ ಬಳಗ ನೇತಾಜಿ ನಗರ, ಹಾಗೂ ಪುತ್ತೂರು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಎಪ್ರಿಲ್ 15 ರಿಂದ 29 ರವರೆಗೆ ನೇರಳಕಟ್ಟೆ ಶ್ರೀ ಗಣೇಶ ಸಭಾಭವನದಲ್ಲಿ ನಡೆಯಲಿದೆ. 

ನೇರಳಕಟ್ಟೆ ಶ್ರದ್ದಾ ಕೇಂದ್ರದ ಡಿ ಕೆ ಸ್ವಾಮಿ ಶಿಬಿರವನ್ನು ಉದ್ಘಾಟಿಸಲಿದ್ದು, ನೇರಳಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬೇಬಿ ನಾಯ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನೆಟ್ಲಮುಡ್ನೂರು ಗ್ರಾ ಪಂ ಅಭಿವೃದ್ದಿ ಅಧಿಕಾರಿ ಶ್ರೀಮತಿ ಅನುಷಾ, ನೇರಳಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಾಂಸ್ಕøತಿಕ ಸಂಘದ ಗೌರವಾಧ್ಯಕ್ಷ ರಾಮಚಂದ್ರ ಅಧ್ಯಾಪಕರು, ನೇರಳಕಟ್ಟೆ ಗೆಳೆಯರ ಬಳಗದ ಗೌರವಾಧ್ಯಕ್ಷ ತನಿಯಪ್ಪ ಗೌಡ, ಪ್ರಗತಿಪರ ಕೃಷಿಕ ಸುರೇಶ್ ರೈ ಕುರ್ಲೆತ್ತಿಮಾರು ಮೊದಲಾದವರು ಭಾಗವಹಿಸಲಿದ್ದಾರೆ. 

ಫೂಟ್ ಪಲ್ಸ್ ಥೆರಪಿ ಆರೋಗ್ಯದೆಡೆಗೆ ಒಂದು ಹೆಜ್ಜೆಯಾಗಿದ್ದು, ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿದೆ. ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ. 30 ನಿಮಿಷ ಟೆನ್ಸ್ ಮತ್ತು ಇಎಂಎಸ್ ಥೆರಪಿಯಿಂದ ದೇಹದಲ್ಲಿ 5 ಕಿಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಸಹಕಾರಿಯಾಗುವ ಚಿಕಿತ್ಸೆಯಾಗಿದೆ. 

ಫೂಟ್ ಪಲ್ಸ್ ಥೆರಪಿಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ, ಪಾರ್ಕಿನ್ ಸನ್, ಸಯಾಟಿಕಾ, ಸರ್ವಿಕಲ್ ಸ್ಟಾಂಡಿಲೈಟಿಸ್, ನಿದ್ರಾಹೀನತೆ, ಥೈರಾಯಿಡ್, ಪಾಶ್ರ್ವವಾಯು, ಬೆನ್ನು ನೋವು, ಬೊಜ್ಜು ನಿವಾರಣೆ ಇನ್ನಿತರ ಕಾಯಿಲೆಗಳಿಗೆ ಪರಿಹಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 15 ರಿಂದ 29ರವರೆಗೆ ನೇರಳಕಟ್ಟೆಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ Rating: 5 Reviewed By: karavali Times
Scroll to Top