ಬಂಟ್ವಾಳ, ಎಪ್ರಿಲ್ 03, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಬಂಟ್ವಾಳ ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ 24*7 ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ದೂರವಾಣಿ ಸಂಖ್ಯೆ 08255-232500 ಬಂಟ್ವಾಳ ಚುನಾವಣಾಧಿಕಾರಿಗಳ ಕಂಟ್ರೋಲ್ ರೂಂ ಸಂಖ್ಯೆಯಾಗಿದ್ದು ಸಾರ್ವಜನಿಕರು ದಿನದ 24 ಗಂಟೆಯೂ ಈ ಸೌಲಭ್ಯವನ್ನು ಪಡೆದುಕೊಂಡು ಚುನಾವಣಾ ಆಯೋಗದೊಂದಿಗೆ ಸಹಕರಿಬಹುದು ಎಂದು ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
3 April 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment