ರಾಕೇಶ್ ಕುಮಾರ್ |
ಪಕ್ಷ ನೋಡಿ ಮತ ಚಲಾಯಿಸಬೇಡಿ, ನಾಯಕತ್ವವನ್ನು ನೋಡಿ ಮತ ಚಲಾಯಿಸಿ. ಯಾಕೆಂದರೆ ಪಕ್ಷ ಮುಖ್ಯವಲ್ಲ, ವ್ಯಕ್ತಿತ್ವ, ನಾಯಕತ್ವ ಗುಣ ಲಕ್ಷಣ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಿ. ಕೆಲವು ಪಕ್ಷಗಳು ನಮಗೆ ಆಮಿಷಗಳನ್ನು ಒಡ್ದುತ್ತವೆ, ಯಾವುದೇ ಆಮಿಷಗಳಿಗೆ ಬಲಿಯಾಗಿ ನಮ್ಮ ದೇಶದ ಅಭಿವೃದ್ಧಿಯನ್ನು ಕುಂಟಿತಗೊಳಿಸಬೇಡಿ. ಸಮರ್ಥ ನಾಯಕನನ್ನು ಆಯ್ಕೆ ಮಾಡಿ. ನಮ್ಮ ಹಳ್ಳಿ ಹಳ್ಳಿಗಳನ್ನು ಆದಷ್ಟು ಅಭಿವೃದ್ಧಿ ಮಾಡುವಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಪ್ರಜೆಗಳಿಗೆ ರಕ್ಷಣೆಯನ್ನು ನೀಡುವ ಸರಕಾರವನ್ನು ಆಯ್ಕೆ ಮಾಡಿ.
ಕೆಲವು ಅಭ್ಯರ್ಥಿಗಳು ಎಲೆ ಮರೆಯ ಕಾಯಿಯಂತೆ ಅದೆಷ್ಟೋ ಸೇವಾ ಕಾರ್ಯಗಳನ್ನು ಮಾಡಿದರೂ ಗುರುತಿಸಿಕೊಳ್ಳದೆ ತನ್ನ ಪಾಡಿಗೆ ತಾನಿದ್ದು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂತಹ ವ್ಯಕ್ತಿಯನ್ನು ನಾವು ಗೆಲ್ಲಿಸಲು ಪ್ರಯತ್ನಿಸೋಣ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಕೆಲಸ ಮಾಡಿಸುತ್ತೇವೆ, ಆ ಕೆಲಸ ಮಾಡಿಸುತ್ತೇವೆ ಎಂದು ಸುಳ್ಳು ಭರವಸೆ ಕೊಡುವ ಪಕ್ಷಕ್ಕೆ ಮತ ಚಲಾಯಿಸಿ ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿ. ಯಾವ ಸರಕಾರ ಬೇಕು ಮತ್ತು ಎಂಥಹ ನಾಯಕ ಬೇಕು ಎಂದು ನಾವು ಆಯ್ಕೆ ಮಾಡುವುದರಲ್ಲಿ ಇರುವುದು. ಮತ ಚಲಾಯಿಸುವಾಗ ಅತ್ಯಂತ ಎಚ್ಚರದಿಂದ ಮತ ಚಲಾಯಿಸಿ. ಹೊಸ ಮತದಾರರು ಅತ್ಯಂತ ಪರಿಶೀಲನೆಯನ್ನು ನಡೆಸಿ ಮತವನ್ನು ಚಲಾಯಿಸಿ. ನಮ್ಮ ಹಳ್ಳಿಗಳು ಅಭಿವೃದ್ಧಿಯಾಗಬೇಕಾದರೆ ಮತ್ತು ನಮ್ಮ ರಕ್ಷಣೆ ಎನ್ನುವುದು ಇನ್ನೂ ಕೂಡ ಬಲಿಷ್ಠವಾಗ ಬೇಕಾದರೆ ನಮ್ಮ ಕೈಯಲ್ಲಿ ಇರುವುದು. ನಮ್ಮ ಸಮಾಜಕ್ಕೆ ಬೇಕಾಗುವ ಸೂಕ್ತ ನಾಯಕನನ್ನು ಆಯ್ಕೆ ಮಾಡಿ.
ರಾಕೇಶ್ ಕುಮಾರ್
0 comments:
Post a Comment