ಬೆಳ್ತಂಗಡಿ, ಎಪ್ರಿಲ್ 23, 2023 (ಕರಾವಳಿ ಟೈಮ್ಸ್) : ಗಂಡನಿಗೆ ಇನ್ನೊಬ್ಬಳು ಯುವತಿಯೊಂದಿಗೆ ಅಕ್ರಮ ಸಂಬಂಧ ಇರುವ ಬಗ್ಗೆ ನೊಂದು ಹಾಗೂ ಗಂಡ, ಆತನ ಪ್ರಿಯತಮೆ ಹಾಗೂ ಆತನ ತಂದೆಯ ಮಾನಸಿಕ ಕಿರುಕುಳದಿಂದ ನೊಂದು ನವವಿವಾಹಿತೆ ಯುವತಿಯೋರ್ವಳು ವಿಷ ಸೇವಿಸಿ ಮೃತಪಟ್ಟ ಘಟನೆ ತಾಲೂಕಿನ ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತ ನವವಿವಾಹಿತೆಯನ್ನು ಕೌಶಲ್ಯ (28) ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ಆಕೆಯ ಗಂಡ ಸುಕೇಶ್, ಮಾವ ಶೇಖರ, ಗಂಡನ ಪ್ರಿಯತಮೆ ಆಸ್ತಿಕ ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಮೃತಳ ತಾಯಿ ರೇವತಿ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕೌಶಲ್ಯಳನ್ನು ಸುಮಾರು 5 ತಿಂಗಳ ಹಿಂದೆ ನೆರೆಮನೆಯ ಸುಕೇಶ್ ಎಂಬಾತನೊಂದಿಗೆ ವಿವಾಹಮಾಡಿಕೊಟ್ಟಿದ್ದು ಮದುವೆಯಾದ 2 ತಿಂಗಳ ನಂತರ ಕೌಶಲ್ಯ ತನ್ನ ತಾಯಿಯ ಬಳಿ ಬಂದು ನನ್ನ ಗಂಡ ಆತನ ದೊಡ್ಡಪ್ಪನ ಮಗ ಪ್ರಕಾಶ್ ಎಂಬಾತನ ಹೆಂಡತಿ ಆಸ್ತಿಕ ಎಂಬಾಕೆಯೊಂದಿಗೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಗಂಡನಲ್ಲಿ ವಿಚಾರಿಸಿದರೆ ಗಂಡ ಸಿಕ್ಕಾಪಟ್ಟೆ ಬೈದುದಲ್ಲದೇ, ಮಾವ ಶೇಖರವರು “ನೀನು ಕುಲಗೋತ್ರ ಇಲ್ಲದವಳು ಆಸ್ತಿಕ ನಮ್ಮ ಸಂಬಂಧಿ ಆಕೆಯ ಬಗ್ಗೆ ಹೇಳಲು ನೀನು ಯಾರು?” ಎಂದು ಬೈದು ತೊಂದರೆ ನೀಡಿರುತ್ತಾರೆ. ಅಲ್ಲದೇ ಗಂಡ ಗಲಾಟೆ ಮಾಡುವ ಸಮಯ ``ನಿನ್ನನಾದರೂ ಬಿಡುತ್ತೇನೆ ಆದರೆ ಆಸ್ತಿಕಳನ್ನು ಬಿಡುವುದಿಲ್ಲ ನೀನು ನನಗೆ ಬೇಡ’’ ಎಂಬಿತ್ಯಾದಿಯಾಗಿ ಹೇಳುತ್ತಾ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಕೌಶಲ್ಯ ಹೇಳುತ್ತಿದ್ದಳು, ಅಲ್ಲದೇ ಆಸ್ತಿಕಳು ಕೂಡ ಮಗಳಲ್ಲಿ ``ನನ್ನ ಮತ್ತು ಸುಕೇಶ್ ಮಧ್ಯೆ ಇರುವ ವಾಟ್ಸಾಪ್ ಚಾಟ್ ನೀನೇನಾದರೂ ಬಹಿರಂಗ ಮಾಡಿದರೆ ನಿನ್ನನ್ನು ಬಿಡುವುದಿಲ್ಲ’’ ಎಂಬಿತ್ಯಾದಿಯಾಗಿ ಬೆದರಿಕೆ ಹಾಕುತ್ತಿದ್ದಳು, ಹೀಗಿರುತ್ತಾ ಎಪ್ರಿಲ್ 20 ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ಮಗಳು ಕೌಶಲ್ಯ ಮನೆಗೆ ಬಂದು ಹುಲ್ಲಿಗೆ ಬಿಡುವ ಔಷಧಿಯನ್ನು ಕುಡಿದಿರುವುದಾಗಿ ತಿಳಿಸಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಉಜಿರೆ ಎಸ್ ಡಿ ಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ಚಿಕಿತ್ಸೆಗೆ ಸ್ಪಂದಿಸದ ಕೌಶಲ್ಯ ಎಪ್ರಿಲ್ 22 ರಂದು ರಾತ್ರಿ 8.37 ರ ವೇಳೆಗೆ ಮೃತ ಪಟ್ಟಿರುವುದಾಗಿ ಆಕೆಯ ತಾಯಿ ರೇವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2023 ಕಲಂ 306, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment