ಬೆಳ್ತಂಗಡಿ, ಎಪ್ರಿಲ್ 05, 2023 (ಕರಾವಳಿ ಟೈಮ್ಸ್) : ಕ್ಷುಲ್ಲಕ ಕಾರಣಕ್ಕೆ ಯುವಕರ ತಂಡವೊಂದು ಯುವಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಉಜಿರೆಯಲ್ಲಿ ಮಂಗಳವಾರ ಸಂಜೆ ವೇಳೆ ನಡೆದಿದೆ.
ಚಾರ್ಮಾಡಿ-ಕಕ್ಕಿಂಜೆ ನಿವಾಸಿ ಮಹಮ್ಮದ್ ಜಾಹೀರ್ ಹಲ್ಲೆಗೊಳಗಾದ ಯುವಕರ. ಆರೋಪಿ ಯುವಕರನ್ನು ಪರಿಚಯದವರೇ ಆದ ಸ್ಥಳೀಯ ನಿವಾಸಿಗಳಾದ ನಿತೇಶ್ ಬಿನ್ ರಾಮಣ್ಣ ಗೌಡ, ಸಚಿನ್ ಬಿನ್ ಸದಾನಂದ, ದಿನೇಶ್ ಬಿನ್ ಅಚ್ಚುತ ಗೌಡ, ಅವಿನಾಶ್ ಅಲಿಯಾಸ್ ರಾಹುಲ್ ಬಿನ್ ಕೃಷ್ಣಪ್ಪ ಗೌಡ ಎಂದು ಹೆಸರಿಸಲಾಗಿದ್ದು ಅವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಸಂಖ್ಯೆ 27/2023 ಕಲಂ 323, 341, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ನಾಲ್ಕೂ ಮಂದಿಯನ್ನು ದಸ್ತಗಿರಿ ಮಾಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment