ಬೆಳ್ತಂಗಡಿ, ಎಪ್ರಿಲ್ 16, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಎಪ್ರಿಲ್ 17 ರಂದು ಸೋಮವಾರ ಒಂದೇ ದಿನದಲ್ಲಿ ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ನಗರದಲ್ಲಿ ವಾಹನ ಸಂಚಾರದ ಮಾರ್ಗ ಬದಲಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್ ಅವರು ಆದೇಶಿಸಿದ್ದಾರೆ.
ಎಪ್ರಿಲ್ 17 ರ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಂಗಳೂರು ಕಡೆ ಸಂಚರಿಸುವ ವಾಹನಗಳು ಕೊಯ್ಯೂರು ಕ್ರಾಸ್ ರಸ್ತೆಯ ಮೂಲಕ ಅದ್ರುಪೆರಾಲ್ ಮುಖಾಂತರ ಪರಪ್ಪು-ಗೇರುಕಟ್ಟೆಯಾಗಿ, ಅದೇ ರೀತಿ ಮಂಗಳೂರಿನಿಂದ ಉಜಿರೆ ಕಡೆ ಸಂಚರಿಸುವ ವಾಹನಗಳು ಗುರುವಾಯನಕೆರೆಯಲ್ಲಿ ಉಪ್ಪಿನಂಗಡಿ ರಸ್ತೆ ಮೂಲಕ ಪರಪ್ಪು ಕ್ರಾಸಿನಲ್ಲಿ ಅದ್ರುಪೆರಾಲ್ ಮುಖಾಂತರ ಸಂಚರಿಸುವಂತೆ ಡೀಸಿ ಆದೇಶದಲ್ಲಿ ಸೂಚಿಸಿದ್ದಾರೆ.
ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಅವರ ಕೋರಿಕೆಯಂತೆ ಡೀಸಿ ಅವರು ಈ ಮಾರ್ಗ ಬದಲಾವಣೆ ಆದೇಶ ಹೊರಡಿಸಿದ್ದು, ಬದಲಾವಣೆಗೊಂಡ ಮಾರ್ಗದಲ್ಲಿ ಅಗತ್ಯ ಸೂಚನಾ ಫಲಕ ಅಳವಡಿಸುವಂತೆ ಹಾಗೂ ಸೂಕ್ತ ಟ್ರಾಫಿಕ್ ಪೊಲೀಸರನ್ನು ನಿಯೋಜಿಸುವಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ಸೂಚಿಸಲಾಗಿದೆ.
0 comments:
Post a Comment