ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಜನ ಕಳೆದ ಐದು ವರ್ಷಗಳಿಂದ ನೆಮ್ಮದಿಯ ಜೀವನ ಮಾಡಿದ್ದಾರೆ ಎಂಬುದೇ ಅತ್ಯಂತ ಖುಷಿ ತಂದಿರುವ ವಿಚಾರ ಎಂದು ಬಂಟ್ವಾಳ ಶಾಸಕ, ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಹೇಳಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ರಿಕ್ಷಾ ಚಾಲಕರ ಜೊತೆ ಸಭೆ ನಡೆಸಿ ಮತಯಾಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಅಭಿವೃದ್ಧಿ ನಿರಂತರ ಪ್ರಕ್ರಿಯೆಯಾಗಿದ್ದ, ಇದರ ಜೊತೆಗೆ ಗೊಂದಲಮಯವಾಗಿದ್ದ ಬಂಟ್ವಾಳವನ್ನು ಶಾಂತಿಯ ಬಂಟ್ವಾಳವಾಗಿ ನಿರ್ಮಾಣ ಮಾಡಲು ಕಾರಣೀಕರ್ತರಾದ ಕ್ಷೇತ್ರದ ಜನ, ಅಧಿಕಾರಿ ವರ್ಗದವರ ಜೊತೆ ಎಲ್ಲರಿಗೂ ಅಭಾರಿಯಾಗಿದ್ದೇನೆ. ದಿನದ 24 ಗಂಟೆ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ರಿಕ್ಷಾ ಚಾಲಕರ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾನು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ ಎಂದರು.
ಅನೇಕ ಜನಪರವಾದ ಅಭಿವೃದ್ಧಿ ಯೋಜನೆಗಳ ಕನಸು ಕಂಡಿದ್ದು, ಎಲ್ಲವನ್ನೂ ಕ್ಷೇತ್ರಕ್ಕೆ ಒದಗಿಸುವ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದವರು ಇದೇ ವೇಳೆ ಮನವಿ ಮಾಡಿದರು.
ಬಳಿಕ ಬರಿಮಾರು ಗ್ರಾಮದ ಬೂತ್ ಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದ ಬಳಿಕ ಕಾರ್ಯಕರ್ತರಲ್ಲಿ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದರು. ಈ ಬಾರಿಯ ಚುನಾವಣೆಯಲ್ಲಿ ಗೆಲುವಿಗಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ರವಿಶಂಕರ್ ಮಿಜಾರು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್, ಪುರಸಭಾ ವ್ಯಾಪ್ತಿಯ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಣೇಶ್ ದಾಸ್ ಪಲ್ಲಮಜಲು, ಕೇರಳದ ಪಾಲಕ್ಕಾಡ್ ಜಿಲ್ಲಾಧ್ಯಕ್ಷ ಹರಿದಾಸ್, ಜಿ ಪಂ ಮಾಜಿ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಬರಿಮಾರು ಗ್ರಾ ಪಂ ಉಪಾಧ್ಯಕ್ಷ ಸದಾಶಿವ ಜಿ, ಸದಸ್ಯರುಗಳಾದ ಜಗದೀಶ್, ವನಿತಾ ಎಲ್ ಕೆ ಧರಣ್, ಪ್ರಮುಖರಾದ ಗಣೇಶ್ ರೈ ಮಾಣಿ, ಸುಬ್ರಹ್ಮಣ್ಯ ಭಟ್ ಬರಿಣಿಕರೆ, ಚಂದ್ರಶೇಖರ್ ಬಾಯಿಲ, ಸದಾನಂದ ಪೂಜಾರಿ, ಜಯಂತ ಪೂಜಾರಿ, ಶಿವಾನಂದ, ಹಂಸರಾಜ್ ಜೈನ್, ಮೋಹನ್ ಕುಮಾರ್ ಜೈನ್, ಪ್ರಭಾಕರ ಸುವರ್ಣ, ಸುಷ್ಮಾ ಮುಳಿಬೈಲು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment