ಬಂಟ್ವಾಳ, ಎಪ್ರಿಲ್ 13, 2023 (ಕರಾವಳಿ ಟೈಮ್ಸ್) : ಬಿ ಕಸ್ಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸು ಎರಡು ಬೈಕುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಮೃತಪಟ್ಟು ಒನ್ನೋರ್ವ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ರಾತ್ರಿ 7.45ರ ವೇಳೆಗೆ ನಡೆದಿದೆ.
ಮೃತ ಬೈಕ್ ಸವಾರರನ್ನು ಸರಪಾಡಿ ನಿವಾಸಿ ಸೇಸಪ್ಪ (34) ಹಾಗೂ ಗಾಯಾಳು ಬೈಕ್ ಸವಾರನನ್ನು ಮಂಗಳೂರು-ಕಾವೂರು ನಿವಾಸಿ ಜಯಾನಂದ (37) ಎಂದು ಹೆಸರಿಸಲಾಗಿದೆ. ಬಸ್ಸು ಚಾಲಕ ಅಜಾರೂಕತೆಯ ಚಾಲನೆಯ ಮೂಲಕ ಬಂಟ್ವಾಳ-ಜಕ್ರಿಬೆಟ್ಟು ಎಂಬಲ್ಲಿ ಬಂಟ್ವಾಳ ಪೇಟೆಯ ಒಳಭಾಗದಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕಿಗೂ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್ ಸವಾರರು ಕೂಡಾ ಬೈಕ್ ಸಮೇತ ಹೆದ್ದಾರಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಗಾಯಗೊಂಡ ಸೇಸಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಬಸ್ಸು ಚಾಲಕ ಶಿವರಾಜ್ ಅವರ ಅಜಾರೂಕತೆಯ ಚಾಲನೆಯೇ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment