ಬಂಟ್ವಾಳ, ಎಪ್ರಿಲ್ 16, 2023 (ಕರಾವಳಿ ಟೈಮ್ಸ್) : ಪ್ರಥಮ ಪಿಯುಸಿ ಓದುತ್ತಿದ್ದಾಗಲೇ ಮನೆಯ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏಕಾಂಗಿಯಾಗಿ ಬಾವಿ ತೋಡಿ ನೀರಿನ ಒರೆತ ಪಡೆಯುವಲ್ಲಿ ಸಫಲನಾದ ಬಂಟ್ವಾಳ ತಾಲೂಕಿನ ನಾಯಿಲ ಕಾಪಿಕಾಡು ನಿವಾಸಿ ಲೋಕನಾಥ-ಮೋಹಿನಿ ದಂಪತಿಯ ಪುತ್ರ ಸೃಜನ್ ಸಾಹಸ ಮೆಚ್ಚಿ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಆತನ ಮನೆಗೆ ಭೇಟಿ ನೀಡಿ ಗೌರವಿಸಿ ಸನ್ಮಾನಿಸಿದೆ.
ಮೊಬೈಲ್ ಚಟದಲ್ಲೇ ಕಾಲ ಕಳೆಯುವ ಇಂದಿನ ಯುವ ತಲೆಮಾರಿಗೆ ಸೃಜನ್ ಸಾಹಸ ಮಾದರಿಯಾಗಿದೆ ಎಂದ ನಿಯೋಗ ವಿದ್ಯಾರ್ಥಿ ಸೃಜನ್ ಮನಸ್ಥಿತಿ ಎಲ್ಲ ವಿದ್ಯಾರ್ಥಿಗಳಿಗೂ ಮಾಡೆಲ್ ಆಗಲಿ ಎಂದು ಹಾರೈಸಿದೆ.
ಸನ್ಮಾನಿಸಿದ ನಿಯೋಗದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ನಾಟಿ, ಆಲ್ಬರ್ಟ್ ಮೆನೆಜಸ್, ರವೀಂದ್ರ ಸಪಲ್ಯ, ಉಮೇಶ್ ಬೋಳಂತೂರು, ಉಮೇಶ್ ನೆಲ್ಲಿಗುಡ್ಡೆ , ಅರುಣ್ ಶೆಟ್ಟಿ, ದಿವಾಕರ್ ಏಳಬೆ, ವಸಂತ ಪೂಜಾರಿ ಕಲ್ಲಗುಡ್ಡೆ, ಅನಿಲ್ ಕೋಲ್ಪೆ, ನಿಖಿಲ್ ಕೋಲ್ಪೆ, ಲಕ್ಷ್ಮಣ ಪೂಜಾರಿ ನಾಯಿಲ, ಶಿವಪ್ಪ ಮಾಸ್ಟರ್, ಭರತ್ ಏಳಬೆ, ಅಶೋಕ್ ಭಂಡಾರಿಬೆಟ್ಟು ಮೊದಲಾದವರಿದ್ದರು.
0 comments:
Post a Comment