ಬಂಟ್ವಾಳ, ಎಪ್ರಿಲ್ 04, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಳ್ಳಿಗೆ ಗ್ರಾಮದ ತೊಡಂಬಿಲ ನಿವಾಸಿ ಮೆಲ್ವಿನ್ ಮೊಂತೆರೋ ಎಂಬವರ ಪತ್ನಿ ನೆಲ್ಲಿ ಲೀನಾ ಮೊಂತೆರೋ (52) ಎಂಬಾಕೆಗೆ ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಮಂಗಳೂರು-ಬಿಜೈ ನಿವಾಸಿ ವಿ ಆರ್ ಸುಧೀರ್ ರಾವ್ ಎಂಬಾತ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೀನಾ ಮೊಂತೆರೋ ಅವರಿಗೆ ಅವರ ಸಂಬಂಧಿ ಲವೀನಾ ಲೋಬೋ ಎಂಬವರ ಮೂಲಕ ಸುಧೀರ್ ರಾವ್ ಪರಿಚಯವಾಗಿದ್ದು, ಈ ಸಂದರ್ಭ ಆತ ಲವೀನಾ ಅವರ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ 2022 ರ ಫೆಬ್ರವರಿ 22 ರಂದು ಬಿ ಸಿ ರೋಡಿನಲ್ಲಿ 2,83,800/- ರೂಪಾಯಿ ನಗದು ಮತ್ತು ಗೂಗಲ್ ಪೇ ಮೂಲಕ 2022 ರ ಡಿಸೆಂಬರ್ 28 ರಂದು 50/- ರೂಪಾಯಿ ಮತ್ತು 84,950 ರೂಪಾಯಿ, 2023 ರ ಜನವರಿ 13 ರಂದು 71 ಸಾವಿರ ರೂಪಾಯಿ, 2023 ರ ಫೆಬ್ರವರಿ 14 ರಂದು 60 ಸಾವಿರ ರೂಪಾಯಿ, ಫೆಬ್ರವರಿ 27 ರಂದು 16 ಸಾವಿರ ರೂಪಾಯಿ ಜನವರಿ 10 ರಂದು 2.5 ಸಾವಿರ ರೂಪಾಯಿ ಜನವರಿ 17 ರಂದು 2,100/-ರೂಪಾಯಿ, ಫೆಬ್ರವರಿ 27 ರಂದು 49 ಸಾವಿರ ರೂಪಾಯಿ, ಫೆಬ್ರವರಿ 14 ರಂದು 45 ಸಾವಿರ ರೂಪಾಯಿ ಹಣವನ್ನು ಕರ್ನಾಟಕ ಬ್ಯಾಂಕ್ ಲಿ ಬೆಂಗಳೂರು ಶಾಖೆಯ ಖಾತೆ ಸಂಖ್ಯೆ 130250010211850ಗೆ ಹಾಕಿಸಿಕೊಂಡಿದ್ದಾನೆ.
ಬಳಿಕ ಮಾರ್ಚ್ 19 ರಂದು ಲವೀನಾ ಲೋಬೋ ಅವರ ಮಕ್ಕಳನ್ನು ಮುಂಬಯಿಗೆ ಬರಲು ಹೇಳಿ ಅಲ್ಲಿ ಮಕ್ಕಳಿಂದ ಮತ್ತೆ 15,600/- ರೂಪಾಯಿ ಹಣವನ್ನು ಪಡೆದು ಬಲ್ಗೆರಿಯಾದಲ್ಲಿ ಚಳಿಯಿರುವುದರಿಂದ ಜಾಕೆಟ್ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಾಸು ಬರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾನೆ.
ಆರೋಪಿ ಸುಧೀರ್ ರಾವ್ ಎಂಬಾತನು ನೆಲ್ಲಿ ಲೀನಾ ಮೊಂತೆರೋ ಅವರಿಂದ ಹಾಗೂ ಮಕ್ಕಳಿಂದ ಸೇರಿ ಒಟ್ಟು 6.30 ಲಕ್ಷ ರೂಪಾಯಿ ಹಣವನ್ನು ಕೆಲಸ ಕೊಡಿಸುವುದಾಗಿ ಪಡೆದುಕೊಂಡು ಮೋಸ ಮಾಡಿರುವುದಾಗಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2023 ಕಲಂ 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment