ಮಂಗಳೂರು, ಎಪ್ರಿಲ್ 20, 2023 (ಕರಾವಳಿ ಟೈಮ್ಸ್) : ಗುರುವಾರ (ಎ 20) ಅಸ್ತಮಿಸಿದ ಶುಕ್ರವಾರ ಸಂಜೆ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ರಂಝಾನ್ 30 ವೃತಗಳನ್ನು ಪೂರ್ಣಗೊಳಿಸಿ ಶನಿವಾರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುವಂತೆ ಖಾಝಿಗಳಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಹಾಗೂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಣಿ ಅವರುಗಳು ಘೋಷಿಸಿದ್ದಾರೆ.
ಗುರುವಾರ ರಂಝಾನ್ ತಿಂಗಳ 29 ಉಪವಾಸ ದಿನಗಳು ಪೂರ್ಣಗೊಂಡಿದ್ದು, ಚಂದ್ರದರ್ಶನಗೊಂಡಿದ್ದರೆ ಶುಕ್ರವಾರ ಹಬ್ಬ ಆಚರಣೆ ಆಗುತ್ತಿತ್ತು. ಆದರೆ ಗುರುವಾರ ಸಂಜೆ ಎಲ್ಲಿಯೂ ಚಂದ್ರದರ್ಶನ ಆಗಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಯಾವುದೇ ಮಾಹಿತಿ ಲಭಿಸದ ಹಿನ್ನಲೆಯಲ್ಲಿ ರಂಝಾನ್ ಉಪವಾಸ ವೃತ 30 ದಿನಗಳನ್ನು ಪೂರ್ಣಗೊಳಿಸಿ ಶನಿವಾರ ಈದುಲ್ ಫಿತ್ರ್ ಆಚರಿಸುವಂತೆ ಖಾಝಿಗಳು ತೀರ್ಮಾನಿಸಿದ್ದಾರೆ.
0 comments:
Post a Comment